ಶಿರಿಯಾ ಮಖಾಂ ಉರೂಸ್ ಇಂದಿನಿಂದ
0
ಮಾರ್ಚ್ 27, 2019
ಕುಂಬಳೆ: ಶಿರಿಯಾದ ಮಸೀದಿಯಲ್ಲಿ ಪರಿಸರದ ಮುಸ್ಲಿಂ ಸ್ನೇಹಿತರ ಸಹಕಾರದೊಂದಿಗೆ ಇಂದಿನಿಂದ ಏ.7ರ ವರೆಗೆ ಮೂರು ವರ್ಷಗಳಿಗೊಮ್ಮೆ ನಡೆಯುವ ಉರೂಸ್ ಉತ್ಸವ ಆರಂಭಗೊಳ್ಳಲಿದೆ.
ಇಂದು ಬೆಳಿಗ್ಗೆ 10 ಕ್ಕೆ ಕುಂಬೋಳ್ ಕೆ.ಎಸ್.ಆಟ್ಟಕ್ಕೋಯ ತಂಙಳ್ ಝಿಯಾರತ್ ಗೆ ಚಾಲನೆ ನೀಡುವರು. ರಾತ್ರಿ ಮಖರಿಬ್ ಪ್ರಾರ್ಥನೆಯ ಬಳಿಕ ನಡೆಯುವ ಸಮಾರಂಭದಲ್ಲಿ ಕೇರಳ ಹಜ್ಜ್ ಸಮಿತಿ ಅಧ್ಯಕ್ಷ ಸಿ.ಮೊಹಮ್ಮದ್ ಪೈಝಿ ಉದ್ಘಾಟಿಸುವರು. ಆಲಿಕುಂಞÂ ಉಸ್ತಾದ್ ಅಧ್ಯಕ್ಷತೆ ವಹಿಸುವರು. ಬಳಿಕ ವಿವಿಧ ದಿನಗಳಲ್ಲಿ ಕಾಂತಪುರ ಎಪಿ ಅಬೂಬಕರ್ ಮುಸ್ಲಿಯಾರ್, ಯು.ಎಂ.ಅಬ್ದುಲ್ ರಹಮಾನ್ ಮುಸ್ಲಿಯಾರ್, ಮುಟ್ಟಂ ಸಯ್ಯದ್ ಕುಂಞÂಕ್ಕೋಯ ತಂಙಳ್, ಸಯ್ಯದ್ ಎಂ.ಎಸ್ ತಂಙಳ್ ಓಲಮುಂಡ, ಸಯ್ಯದ್ ಕೆ.ಎಸ್ ಅಲಿ ತಂಙಳ್, ಸಯ್ಯದ್ ಅಬ್ದುಲ್ ರಹಮಾನ್ ಇಂಬಿಚ್ಚಿಕೋಯ ತಂಙಳ್ ಬಾಯಾರ್, ಸಯ್ಯದ್ ಮೊಹಮ್ಮದ್ ಮದನಿ ತಂಙಳ್ ಮೊಗ್ರಾಲ್, ಸಯ್ಯದ್ ಜಾಫರ್ ಸಾದಿಕ್ ತಂಙಳ್ ಕುಂಬೋಳ್, ಮೆನ್ಮನಾಡ್ ಉಸ್ತಾದ ಮೊದಲಾದವರು ಮತ ಪ್ರವಚನ ನಡೆಸುವರು.
ಏ.6 ರಂದು ಸಮಾರೋಪ ಸಮಾರಂಭವನ್ನು ಸಯ್ಯದ್ ಮೊಹಮ್ಮದ್ ಜಿಫ್ರಿ ಮುತ್ತುಕ್ಕೋಯ ತಂಙಳ್ ಉದ್ಘಾಟಿಸುವರು. ಪ್ರೊ.ಕೆ.ಆಲಿಕುಟ್ಟಿ ಮುಸ್ಲಿಯಾರ್ ಅಧ್ಯಕ್ಷತೆ ವಹಿಸುವರು. ಏ.7 ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಮೌಲೀದ್ ಪಾರಾಯಣದ ಬಳಿಕ ಬೃಹತ್ ಅನ್ನದಾನದೊಂದಿಗೆ ಸಮಾರೋಪಗೊಳ್ಳಲಿದೆ ಎಂದು ಮಸೀದಿಯ ಪದಾಧಿಕಾರಿಗಳು ಕುಂಬಳೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಯ್ಯದ್ ಹಾದಿ ತಂಙಳ್ ಮೊರಾಲ್(ಮಸೀದಿ ಅಧ್ಯಕ್ಷ) ಉರೂಸ್ ಸಮಿತಿ ಅಧ್ಯಕ್ಷ ಬಿ.ಎಂ.ಮೋಣು ಬತ್ತೇರಿ, ಜಿ.ಎ.ಮೊಯ್ದೀನ್ ಕುಂಞÂ, ಖಾದರ್ ಬತ್ತೇರಿ, ಇಬ್ರಾಹಿಂ ಹಾಜಿ ಕಯ್ಯಾರ್, ಅಬೂಬಕರ್ ಜಿ.ಎ, ಜಲೀಲ್ ಶಿರಿಯಾ., ಹನೀಫ್ ಮೊದಲಾದವರು ಉಪಸ್ಥಿತರಿದ್ದರು.

