HEALTH TIPS

ಬಿಎಸ್ ಎನ್ ಎಲ್ ಲ್ಯಾಂಡ್ ಲೈನ್ ಗ್ರಾಹಕರಿಗೆ ಉಚಿತ ವೈಫೈ!

ನವದೆಹಲಿ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಸುದ್ದಿಯಾಗಿದ್ದ ಸರ್ಕಾರಿ ಸ್ವಾಮ್ಯದ ದೂರವಾಣಿ ಸಂಪರ್ಕ ಸಂಸ್ಥೆ ಬಿಎಸ್ ಎನ್ ಎಲ್ ಮಾರುಕಟ್ಟೆಯಲ್ಲಿ ಭರ್ಜರಿ ಪೈಪೋಟಿ ನೀಡಲು ಸಜ್ಜಾಗಿದ್ದು, ಇದೀಗ ಬಿಎಸ್ ಎನ್ ಎಲ್ ಲ್ಯಾಂಡ್ ಲೈನ್ ಗ್ರಾಹಕರಿಗೆ ಉಚಿತ ವೈಫೈ ಸೇವೆ ನೀಡುವ ಕುರಿತು ಘೋಷಣೆ ಮಾಡಿದೆ. ಎಲ್ಲಾ ಲ್ಯಾಂಡ್ ಲೈನ್ ಫೋನ್ ಬಳಸುತ್ತಿರುವ ಗ್ರಾಹಕರಿಗಾಗಿ ಉಚಿತ ಬ್ರಾಡ್ ಬ್ಯಾಂಡ್ ಸೇವೆಯನ್ನು ಒದಗಿಸಲು ಬಿಎಸ್ ಎನ್ ಎಲ್ ಮುಂದಾಗಿದ್ದು, ಲ್ಯಾಂಡ್ ಲೈನ್ ಗ್ರಾಹಕರು ಉಚಿತವಾಗಿ ಹೈಸ್ಪೀಡ್ ಹೋಮ್ ವೈಫೈ ಸೇವೆಯನ್ನು ಪಡೆಯಬಹುದಾಗಿದೆ. ಗ್ರಾಹಕರು ದಿನಕ್ಕೆ 10 ಎಂಬಿಪಿಎಸ್ ವೇಗದಲ್ಲಿ 5 ಜಿಬಿ ಡೇಟಾವನ್ನು ಡೌನ್‍ಲೋಡ್ ಮಾಡುವ ಅವಕಾಶವನ್ನು ಬಿಎಸ್‍ಎನ್‍ಎಲ್ ಸಂಸ್ಥೆ ಒದಗಿಸುತ್ತಿದೆ. ಇದರ ಜೊತೆಗೆ ಬಿಎಸ್‍ಎನ್‍ಎಲ್ ಸಂಸ್ಥೆ ಲ್ಯಾಂಡ್ ಲೈನ್ ಮತ್ತು ಮೊಬೈಲ್ ಗ್ರಾಹಕರಿಗೆ 'ಫ್ರಿ ವಾಯ್ಸ್ ಕಾಲಿಂಗ್' ಸೇವೆಯನ್ನು ಒದಗಿಸುತ್ತಿದೆ. ವಿಂಗ್ಸ್ ವಿಒಐಪಿ ಪ್ಲಾಟ್ ಫಾರಂ ಮೂಲಕ ಈ ಸೇವೆ ದೊರಕಲಿದೆ. ಗ್ರಾಹಕರು ವೈಫೈ ಸೇವೆಯನ್ನು ಪಡೆಯಲು ಕೇವಲ ಒಂದು ಕರೆ ಮಾಡಿದರೆ ಸಾಕು. ಬಿಎಸ್‍ಎನ್‍ಎಲ್ ನೀಡಿರುವ 18003451504 ಸಂಖ್ಯೆಗೆ ಕರೆ ಮಾಡುವ ಮೂಲಕ ಈ ಯೋಜನೆಯನ್ನು ಪಡೆಯಬಹುದಾಗಿದೆ. ಹೋಮ್ ವೈಫೈ ಇನ್ಸ್ಟಾಲ್ ಮಾಡಲು ಯಾವುದೇ ಶುಲ್ಕವಿಲ್ಲ ಎಂದು ಬಿಎಸ್‍ಎನ್‍ಎಲ್ ಸಂಸ್ಥೆ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries