ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ 'ಮೈ ಭೀ ಚೌಕಿದಾರ್ ' ಟ್ವಿಟರ್ ನಲ್ಲಿ ಟಾಪ್ ಟ್ರೆಂಡ್ ಆಗಿದ್ದು, ದೇಶ, ವಿದೇಶದಲ್ಲೂ ಟಾಪ್ ಟ್ರೆಂಡ್ ಆಗಿದೆ.
ಇದೇ ರೀತಿ ಭಾನುವಾರ ಚೌಕಿದಾರ್ ಫಿರ್ ಸೇ ಹ್ಯಾಶ್ ಟಾಗ್ ಸದ್ಯ ದೇಶದಲ್ಲಿ ನಂಬರ್ 1 ಟ್ರೆಂಡ್ ಆಗಿದೆ. ಅಲ್ಲದೇ ವಿಶ್ವದಾದ್ಯಂತ ಹಲವು ಗಂಟೆಗಳ ಕಾಲ ಟಾಪ್ ಟ್ರೆಂಡ್ ಆಗಿದ್ದ #chowkidarphirse ಸದ್ಯ ನಂ.2 ಸ್ಥಾನದಲ್ಲಿದ್ದು,ಲಕ್ಷಾಂತರ ನೆಟ್ಟಿಗರು ಈ ಬಗ್ಗೆ ಟ್ವೀಟ್ ಮಾಡುತ್ತಿದ್ದಾರೆ.
ಬಿಜೆಪಿಯ ಹಲವು ನಾಯಕರು ಅಷ್ಟೇ ಅಲ್ಲದೇ ಪ್ರಧಾನಿ ಮೋದಿ, ಕೇಸರಿ ಪಕ್ಷದ ಹಲವು ಬೆಂಬಲಿಗರು ಸಹ ಟ್ವಿಟರ್ ಖಾತೆಯಲ್ಲಿ ತಮ್ಮ ಹೆಸರಿನ ಜೊತೆಗೆ ಚೌಕಿದಾರ್ ಎಂದು ಆರಂಭದಲ್ಲಿ ಸೇರಿಸಿಕೊಂಡಿದ್ದಾರೆ.

ಚೌಕಿದಾರ್ ಫಿರ್ ಸೇ ಎಂಬ ಹ್ಯಾಶ್ ಟ್ಯಾಗ್ ಬಳಸಿಕೊಂಡು ಸುಮಾರು ಒಂದೂವರೆ ಲಕ್ಷದಷ್ಟೂ ಟ್ವೀಟ್ ಗಳು ಹರಿದಾಡುತ್ತಿದ್ದು, ಟ್ವಿಟರ್ ನಲ್ಲಿ ಟಾಪ್ ಟ್ರೆಂಡಿಂಗ್ ಆಗಿದೆ. ಅಲ್ಲದೇ ಪ್ರಧಾನಿ ಮೋದಿ ಟ್ವೀಟರ್ ಖಾತೆಯಲ್ಲಿ ತಮ್ಮ ಹೆಸರನ್ನು ಚೌಕಿದಾರ್ ನರೇಂದ್ರ ಮೋದಿ ಎಂದು ಬದಲಾಯಿಸಿಕೊಂಡಿದ್ದು, #ChowkidarNarendramodi ಎಂಬ ಹ್ಯಾಶ್ ಟ್ಯಾಗ್ ಸದ್ಯ ಟ್ವಿಟರ್ ನಲ್ಲಿ ಟಾಪ್ 2 ಟ್ರೆಂಡಿಂಗ್ ಆಗಿದೆ. ಈ ಬಗ್ಗೆ ಇದವರೆಗೂ ಸುಮಾರು 10 ಸಾವಿರ ಮಂದಿ ನೆಟ್ಟಿಗರು ಟ್ವೀಟ್ ಮಾಡಿದ್ದಾರೆ.
ಪ್ರತಿಪಕ್ಷಗಳು ಕೂಡಾ ಈ ಹ್ಯಾಶ್ ಟ್ಯಾಗ್ ಬಳಸಿಕೊಂಡು ಕಾಲೆಳೆಯುತ್ತಿದ್ದರೆ, ಕೆಲವು ಮೋದಿ ವಿರೋಧಿಗಳು ಸಹ ಈ ಹ್ಯಾಶ್ ಟ್ಯಾಗ್ ಗಳನ್ನು ಬಳಸಿಕೊಂಡು ಟ್ರೋಲ್ ಮಾಡುತ್ತಿದ್ದಾರೆ.