ಕಾರುಣ್ಯ ಆರೋಗ್ಯ ಸುರಕ್ಷೆ ಯೋಜನೆ ಏಪ್ರಿಲ್ ನಲ್ಲಿ ಆರಂಭ
0
ಮಾರ್ಚ್ 25, 2019
ಕಾಸರಗೋಡು: ಕಾರುಣ್ಯ ಆರೋಗ್ಯ ಸುರಕ್ಷೆ ಯೋಜನೆ ಜಿಲ್ಲೆಯಲ್ಲಿ ಏಪ್ರಿಲ್ ತಿಂಗಳಿಂದ ಆರಂಭಗೊಳ್ಳಲಿದೆ.
5 ಲಕ್ಷ ರೂ. ಮೌಲ್ಯದ ಉಚಿತ ಚಿಕಿತ್ಸೆ ಈ ಯೋಜನೆ ಮೂಲಕ ಪ್ರತಿವರ್ಷ ಒಂದೊಂದು ಕುಟುಂಬಕ್ಕೂ ಲಭಿಸುತ್ತಿದೆ. ಈಗ ಜಿಲ್ಲೆಯಲ್ಲಿ ಆರ್.ಎಸ್.ಬಿ.ವೈ. ಚಿಟ್ ಯೋಜನೆ(ಆರೋಗ್ಯ ವಿಮೆ) ಸದಸ್ಯತನಹೊಂದಿರುವ 1,00,899 ಕುಟುಂಬಗಳಿಗೆ ಸಾಮಾಜಿಕ-ಆರ್ಥಿಕ-ಜಾತಿ ಗಣತಿ ಪ್ರಕಾರದ ಕುಟುಂಬಗಳು ಸೇರಿರುವವು ನೂತನ ಯೋಜನೆಯಲ್ಲಿಒ ಅಳವಡಗೊಳ್ಳಲಿವೆ. ಈ ಪ್ರಕಾರ ಕಾರುಣ್ಯ ಆರೋಗ್ಯ ಸುರಕ್ಷೆ ಯೋಜನೆ ಪ್ರಕಾರ ಕಾರ್ಡ್ ನೀಡಲಾಗುತ್ತದೆ. ಕುಟುಂಬದ ಪ್ರತಿ ಸದಸ್ಯರಿಗೆ ಪ್ರತ್ಯೇಕವಾಗಿ ಕಾರ್ಡ್ ವಿತರಿಸಲಾಗುವುದು. ಪಡಿತರ ಚೀಟಿ, ಆಧಾರ್ ಕಾರ್ಡ್, ಆರ್.ಎಸ್.ಬಿ.ವೈ. ಸ್ಮಾರ್ಟ್ ಕಾರ್ಡ್ ಇತ್ಯಾದಿ ಸಹಿತ ಪಂಚಾಯತ್ ಮಟ್ಟದಲ್ಲಿ ಸಿದ್ದಗೊಳಿಸುವ ವಿತರಣೆ ಕೇಂದ್ರ ಮೂಲಕ ಕಾರ್ಡ್ ಪಡೆದುಕೊಳ್ಳಬೇಕು ಚುನಾಯಿತರಾಗುವ ಜನಪ್ರತಿನಿಧಿಗಳ, ಸದಸ್ಯರ ಸಂಖ್ಯೆಯ ಪರಿಧಿ ಇರುವುದಿಲ್ಲ. 50 ರೂ. ಒಟ್ಟು ಕುಟುಂಬದ ಶುಲ್ಕವಾಗುತ್ತದೆ. ಈ ಕಾರ್ಡ್ ನಂಬ್ರ ಬಳಸಿ ಯೋಜನೆಯಲ್ಲಿ ಸದಸ್ಯರಾಗಿರುವ ಎಲ್ಲ ಆಸ್ಪತ್ರೆಗಳಲ್ಲಿ ಸಂಬಂಧ ಪಟ್ಟ ಕುಟುಂಬಗಳುಪ್ರತಿವರ 5 ಲಕ್ಷ ರೂ. ಮೌಲ್ಯದ ಚಿಕಿತ್ಸೆ ಪಡೆಯಬಹುದಾಗಿದೆ.
ಜಿಲ್ಲೆಯಲ್ಲಿ ನಡೆಸಲಾಗುವ ಯೋಜನೆಯ ಚಟುವಟಿಕೆಗಳ ಕುರಿತು ಜಿಲ್ಲಾ ಮಟ್ಟದ ಕೋರ್ ಸಮಿತಿ ಸಭೆ ಜಿಲ್ಲಾಧಿಕಾರಿಕಚೇರಿ ಸಭಾಂಗಣದಲ್ಲಿ ಜರುಗಿತು. ಹೆಚ್ಚುವರಿ ದಂಡನಾಧಿಕಾರಿ ಸಿ.ಬಿಜು ಅಧ್ಯಕ್ಷತೆ ವಹಿಸಿದ್ದರು.
ಚಿಯಾಕ್ ಜಿಲ್ಲಾ ಯೋಜನೆ ಮೆನೆಜರ್ ಎಂ.ಸತೀಶನ್ ಯೋಜನೆ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಕಾರ್ಮಿಕ ಅಧಿಕಾರಿ(ಎನ್ ಫೋರ್ಸ್ ಮೆಂಟ್) ಷಾಜು ಕೆ.ಎ., ಪಂಚಾಯತು ಇಲಾಖೆ ಸಹ ನಿರ್ದೇಶಕ ಅರುಣ್ ಟಿ.ಜೆ., ಜಿಲ್ಲಾ ಮಾಹಿತಿ ಅಧಿಕಾರಿ ಮಧುಸೂದನನ್ ಎಂ., ಡೆಪ್ಯೂಟಿ ಡಿ.ಎಂ.ಒ.ಡಾ.ಕೆ.ಕೆ.ಶಾಂಟಿ, ಎನ್.ಎಚ್.ಎಂ.ಜಿಲ್ಲಾ ಕಾರ್ಯಕ್ರಮಾಧಿಕಾರಿ ಡಾ.ರಾಮನ್ ಸ್ವಾತಿ ವಾಮನ್, ಸಹಾಯಕ ಬುಡಕಟ್ಟು ಜನಾಂಗ ಅಭವೃದ್ಧಿ ಅಧಿಕಾರಿ ಷಮೀನಾ ಎಂ., ಕುಟುಂಬಶ್ರೀ ಮಿಷನ್ ಡಿ.ಪಿ.ಎಂ.ಶ್ವೇತಶ್ರೀ ಮೋಹನ್ ಮೊದಲಾದವರು ಉಪಸ್ಥಿತರಿದ್ದರು.

