HEALTH TIPS

ಎರಿಕ್ಸನ್ ಇಂಡಿಯಾ ಪ್ರಕರಣ: ನೆರವು ನೀಡಿದ ಸಹೋದರ ಮುಖೇಶ್ ಅಂಬಾನಿಗೆ ಧನ್ಯವಾದ ಹೇಳಿದ ಅನಿಲ್ ಅಂಬಾನಿ

ನವದೆಹಲಿ: ಬಿಲಿಯನೇರ್ ಉದ್ಯಮಿ ಅನಿಲ್ ಅಂಬಾನಿ ತನ್ನ ನೆರವಿಗೆ ಧಾವಿಸಿದ ಮುಖೇಶ್ ಅಂಬಾನಿಗೆ ಸಹೋದರ ಅನಿಲ್ ಅಂಬಾನಿ ಧನ್ಯವಾದ ತಿಳಿಸಿದ್ದಾರೆ. ರಿಲಯನ್ಸ್ ಕಮ್ಯುನಿಕೇಷನ್ಸ್ ಅಧ್ಯಕ್ಷ ಅನಿಲ್ ಅಂಬಾನಿ ಅವರು ಸುಪ್ರೀಂ ಕೋರ್ಟ್ ಗಡುವು ಮುಗಿಯುವ ಒಂದು ದಿನ ಮುಂಚಿತವಾಗಿಯೇ ಎರಿಕ್ಸನ್ ಇಂಡಿಯಾ ಕಂಪನಿಗೆ 458.77 ಕೋಟಿ ರೂ.ಗಳನ್ನು ಪಾವತಿಸುವ ಮೂಲಕ ಜೈಲು ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದರು. ಎರಿಕ್ಸನ್ ಇಂಡಿಯಾ ಕಂಪನಿಗೆ 458.77 ಕೋಟಿಗಳನ್ನು ಪಾವತಿ ಮಾಡುವುದಕ್ಕೆ ಅನಿಲ್ ಅಂಬಾನಿಗೆ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ನೆರವು ನೀಡಿದ್ದರು. ನನಗೆ ಸಮಯೋಚಿತ ನೆರವು ನೀಡಿದ ನನ್ನ ಹಿರಿಯ ಸಹೋದರ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿಗೆ ಹೃದಯಪೂರ್ವಕ ಧನ್ಯವಾದಗಳು, ನಾನು ಮತ್ತು ನನ್ನ ಕುಟುಂಬ ಇದಕ್ಕಾಗಿ ಕೃತಜ್ಞರಾಗಿರುತ್ತೇವೆ ಎಂದು ಅನಿಲ್ ಅಂಬಾನಿ ಹೇಳಿದ್ದಾರೆ. ಸ್ವೀಡನ್ ಮೂಲದ ದೂರ ಸಂಪರ್ಕ ಉಪಕರಣ ತಯಾರಿಕಾ ಸಂಸ್ಥೆ ಎರಿಕ್ಸನ್ ಗೆ ಮುಂದಿನ 4 ವಾರಗಳೊಳಗೆ ಬಾಕಿ ಪಾವತಿಸಬೇಕು. ಇಲ್ಲದಿದ್ದರೆ ಮೂರು ತಿಂಗಳು ಜೈಲು ಶಿಕ್ಷೆ ಎದುರಿಸಬೇಕು ಎಂದು ಸುಪ್ರಿ?ಂ ಕೋರ್ಟ್ ಕಳೆದ ತಿಂಗಳು ಅನಿಲ್ ಅಂಬಾನಿಗೆ ಎಚ್ಚರಿಕೆ ನೀಡಿತ್ತು. ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಗ್ರೂಪ್‍ಗೆ (ಎಡಿಎಜಿ) ರಫೆಲ್ ಜೆಟ್ ಡೀಲ್‍ನಲ್ಲಿ ಹೂಡಿಕೆ ಮಾಡಲು ದುಡ್ಡಿದೆ. ಆದರೆ ತನಗೆ ಕೊಡಬೇಕಿರುವ 550 ಕೋಟಿ ರೂ. ಬಾಕಿ ನೀಡಲು ಸತಾಯಿಸುತ್ತಿದೆ ಎಂದು ಎರ್ರಿಕ್ಸನ್ ದೂರಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries