HEALTH TIPS

ಸಿಂಧೂರ ಯವಕ ವೃಂದದ ಅದ್ದೂರಿ 18ನೇ ವಾರ್ಷಿಕೋತ್ಸವ

 
         ಬದಿಯಡ್ಕ: ಬೇಳ ವಿಷ್ಣುಮೂರ್ತಿ ನಗರದಲ್ಲಿ ಸಿಂಧೂರ ಯುವಕ ವೃಂದದ ವಾರ್ಷಿಕೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಇತ್ತೀಚೆಗೆ ಜರಗಿತು.
        ತಂತ್ರಿವರ್ಯರಾದ ಉಳಿಯತ್ತಾಯ ಬ್ರಹ್ಮಶ್ರೀ ವೇ.ಮೂ. ವಿಷ್ಣು ಆಸ್ರರು ಸಮಾರಂಭವನ್ನು
ಉದ್ಘಾಟಿಸಿದರು.ವಿಷ್ಣುಮೂರ್ತಿ ಸೇವಾಸಮಿತಿಯ ಅಧ್ಯಕ್ಷ ಶ್ರೀಧರ ಪ್ರಸಾದ್ ಮಾಸ್ತರ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
           ಊರಿನ ಹಿರಿಯರಾದ ವಿಷ್ಣುಮೂರ್ತಿ ಸೇವಾ ಸಮಿತಿಯ ಕೋಶಾಧಿಕಾರಿ ಏಣಿಯರ್ಪು ಚೋಯಿ ಮಣಿಯಾಣಿ ಹಾಗೂ ಏಣಿಯರ್ಪು ಕೋದಂರ್ಬತ್ತ್  ತರವಾಡಿನ ಪ್ರಧಾನ ಪೂಜಾರಿ ಬಾಲಕೃಷ್ಣ ಅವರನ್ನು ಈ ಸಂದರ್ಭ ಗೌರವಿಸಲಾಯಿತು. ಊರಿನ ಬಾಲ ಪ್ರತಿಭೆ, ಕನ್ನಡ ಕೋಗಿಲೆ ಖ್ಯಾತಿಯ ಗಾಯಕಿ ಕುಮಾರಿ ಅಪೇಕ್ಷಾ ಪೈ ಯನ್ನು ಸನ್ಮಾನಿಸಲಾಯಿತು. ಬೇಳ ಕುಮಾರಮಂಗಲ ಶ್ರೀಕ್ಷೇತ್ರದ ಪ್ರಧಾನ ಅರ್ಚಕ ರಾಮಚಂದ್ರ ಅಡಿಗ ಬೇಳ, ಸಿಂಧೂರ ಯುವಕ ವೃಂದದ ಅಧ್ಯಕ್ಷ ಸೀತಾರಾಮ ಶೆಟ್ಟಿ ಉಪಸ್ಥಿತರಿದ್ದರು. ಗೌತಮ್ ಶೆಟ್ಟಿ ಮತ್ತು ಶ್ರವಣ್ ಸನ್ಮಾನಿತರ ಪರಿಚಯ ವಾಚಿಸಿದರು. ಅಶ್ವಿನಿ ಪ್ರದೀಪ್ ಸನ್ಮಾನ ಪತ್ರ ವಾಚಿಸಿದರು.
         ವಿಷ್ಣುಮೂರ್ತಿ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸದಾಶಿವ ಮಾಸ್ತರ್ ಸ್ವಾಗತಿಸಿ, ಸಿಂಧೂರ ಯುವಕ ವೃಂದದ ಕಾರ್ಯದರ್ಶಿ ಪುಷ್ಪರಾಜ್ ರೈ ವಂದಿಸಿದರು. ಅಧ್ಯಾಪಕ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ಕಾರ್ಯಕ್ರಮ ನಿರೂಪಿಸಿದರು.
      ಸ್ಥಳೀಯ ಶ್ರೀ ವಿಷ್ಣುಮೂರ್ತಿ ಬಾಲಗೋಕುಲ, ನಟರಾಜ ಡ್ಯಾನ್ಸ್ ಗ್ರೂಪ್ ವತಿಯಿಂದ ನೃತ್ಯ ವೈವಿಧ್ಯ ನಡೆಯಿತು. ಸಿಂಧೂರ ಯುವಕ ವೃಂದದ ಪ್ರಾಯೋಜಕತ್ವದಲ್ಲಿ ಸುಧೀರ್ ಉಳ್ಳಾಲ್ ನೇತೃತ್ವದ ಸಿಟಿ ಗಾಯ್ಸ್ ಕುಡ್ಲ ಕ್ವೀನ್ಸ್ ಮಂಗಳೂರು ಇವರಿಂದ ನೃತ್ಯ ಸಿಂಚನ ಕಾರ್ಯಕ್ರಮ ಪ್ರೇಕ್ಷಕರ ಮನಸೂರೆಗೊಂಡಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries