HEALTH TIPS

ಲೋಕ ಸಮರದ 4ನೇ ಹಂತ ಇಂದು-9 ರಾಜ್ಯ, 72 ಕ್ಷೇತ್ರಗಳಲ್ಲಿ ಮತದಾನ

   
        ಹೊಸದಿಲ್ಲಿ: ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಚುನಾವಣೆ ಇಂದು 9 ರಾಜ್ಯದ 72 ಕ್ಷೇತ್ರಗಳಲ್ಲಿ ಮತದಾನ ಆರಂಭಗೊಂಡಿದೆ. 
            ಸುಗಮ, ಶಾಂತಿಯುತ ಹಾಗೂ ಪಾರದರ್ಶಕ ರೀತಿಯಲ್ಲಿ ಮತದಾನ ನಡೆಸಲು ವ್ಯಾಪಕ ಸಿದ್ಧತೆ ಮಾಡಿಕೊಳ್ಳಲಾಗಿದೆ. 9 ರಾಜ್ಯಗಳ 72 ಲೋಕಸಭಾ ಕ್ಷೇತ್ರಗಳು ಮತ್ತು ಜಮ್ಮು ಕಾಶ್ಮೀರದ ಅನಂತ್‍ನಾಗ್ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ. ಮಹಾರಾಷ್ಟ್ರದ 17, ರಾಜಸ್ಥಾನ, ಉತ್ತರಪ್ರದೇಶದಲ್ಲಿ ತಲಾ 13, ಪಶ್ಚಿಮ ಬಂಗಾಳದ 8, ಮಧ್ಯಪ್ರದೇಶ ಮತ್ತು ಓಡಿಶಾದ ತಲಾ 6, ಬಿಹಾರದ 5 ಮತ್ತು ಜಾಖರ್ಂಡ್‍ನ 3 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. 
    ಕೇಂದ್ರ ಸಚಿವರಾದ ಎಸ್.ಎಸ್. ಅಹ್ಲುವಾಲಿಯ, ಬಾಬುಲ್ ಸುಪ್ರಿಯೊ, ಗಿರಿರಾಜ್ ಸಿಂಗ್, ಗಜೇಂದ್ರ ಸಿಂಗ್ ಶೇಖಾವತ್, ಪಿ.ಪಿ. ಚೌಧರಿ, ಸುಭಾಷ್ ಭಾಮ್ರೆ ಮತ್ತು ಸುದರ್ಶನ್ ಭಗತ್, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಪತ್ನಿ ಡಿಂಪಲ್ ಯಾದವ್, ಚಿತ್ರ ನಟಿ ಊರ್ಮಿಳಾ ಮಾತೊಂಡ್ಕರ್, ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.
   ಜೊತೆಗೆ  ಓಡಿಶಾದ 42 ವಿಧಾನಸಭಾ ಕ್ಷೇತ್ರಗಳಿಗೂ ಮತದಾನ ನಡೆಯುತ್ತಿದೆ. ಕೆಲವು ಕ್ಷೇತ್ರಗಳಲ್ಲಿ ಮರು ಚುನಾವಣೆಯೂ ನಡೆಯಲಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries