HEALTH TIPS

ಸೈನ್ಯಕ್ಕೆ ಸೇರಲು ಇಚ್ಚಿಸುವವರಿಗೆ ಮೇ 8 ರಂದು ಅವೇಕ್ ನಿಂದ ಸ್ಕ್ರೀನಿಂಗ್ ಪರೀಕ್ಷೆ


   ಉಪ್ಪಳ: ಅವೇಕ್  ಕಾಸರಗೋಡು  ಮತ್ತು ಸದ್ಗುರು ಶ್ರೀ ನಿತ್ಯಾನಂದ ಮಹಾಪೀಠ ಚಾರಿಟೇಬಲ್ ಟ್ರಸ್ಟ್ ಕೊಂಡೆವೂರು ಇದರ ಸಂಯುಕ್ತ ಆಶ್ರಯದಲ್ಲಿ ಕಾಸರಗೋಡು ಜಿಲ್ಲೆಯ ಯುವಕರಿಗೆ ಭಾರತೀಯ ಸೈನ್ಯಕ್ಕೆ ಸೇರಲು ಅವಕಾಶ ಒದಗಿಸಿಕೊಡುವ ಉದ್ದೇಶದಿಂದ ಒಂದು ತಿಂಗಳ ಉಚಿತ ರೆಕ್ರೂಟ್ಮೆಂಟ್ ತರಬೇತಿ ಶಿಬಿರವನ್ನು ನಡೆಸಲು ತೀರ್ಮಾನಿಸಲಾಗಿದೆ. ಶಿಬಿರದ ಯಶಸ್ಸಿಗೋಸ್ಕರ ಭಾನುವಾರ ಸಂಜೆ ಉಪ್ಪಳ ಕೊಂಡೆವೂರು ಶ್ರೀನಿತ್ಯಾನಂದ ಯೋಗಶ್ರಮದಲ್ಲಿ ಸ್ವಾಗತ ಸಂಘ ರೂಪೀಕರಣ ಸಭೆ ನಡೆಯಿತು.
     ಕೊಂಡೆವೂರು ಶ್ರೀ ನಿತ್ಯಾನಂದ ಆಶ್ರಮದ ಶ್ರೀಯೋಗಾನಂದ ಸರಸ್ವತಿ ಸ್ವಾಮಿಗಳ ಸಾನಿಧ್ಯದಲ್ಲಿ ಪ್ರಾರಂಭವಾದ ಸಭೆಯಲ್ಲಿ ಅವೇಕ್ ಕಾಸರಗೋಡು ಇದರ ಅಧ್ಯಕ್ಷ ನ್ಯಾಯವಾದಿ. ಕೆ. ಶ್ರೀಕಾಂತ್ ಅಧ್ಯಕ್ಷತೆ ವಹಿಸಿದ್ದರು. ಸಂಘಟಕ ಸಮಿತಿ ರೂಪೀಕರಣದಲ್ಲಿ ಗೌರವಾಧ್ಯಕ್ಷರಾಗಿ ಶ್ರೀಧರ ಶೆಟ್ಟಿ ಮುಟ್ಟ,ಅಧ್ಯಕ್ಷರಾಗಿ ನಾರಾಯಣ ಹೆಗ್ಡೆ, ಉಪಾಧ್ಯಕ್ಷರು ಗಳಾಗಿ ಗೋಪಾಲ ಶೆಟ್ಟಿ ಅರಿಬೈಲ್, ನ್ಯಾಯವಾದಿ ವಿ.ಬಾಲಕೃಷ್ಣ ಶೆಟ್ಟಿ, ರಾಮಪ್ಪ ಮಂಜೇಶ್ವರ, ಹರೀಶ್ ಕೆ. ಸುಧಾಮ ಗೋಸಾಡ, ಪ್ರಧಾನ ಕಾರ್ಯದರ್ಶಿಯಾಗಿ ಕೆ. ಗುರುಪ್ರಸಾದ್ ಪ್ರಭು, ಕಾರ್ಯದರ್ಶಿಗಳಾಗಿ ಪುಷ್ಪರಾಜ್, ರಾಮಚಂದ್ರ, ಸುಕುಮಾರ್ ಕುದ್ರೆಪ್ಪಾಡಿ, ಮನೋಹರನ್ ಕೆ.ಜಿ,  ಬಾಲಕೃಷ್ಣ ಅಂಬಾರ್, ಧನಂಜಯ್, ಎ.ಕೆ. ಕಯ್ಯಾರ್, ಕೋಶಾಧಿಕಾರಿಯಾಗಿ ಶಶಿಧರ್ ಶೆಟ್ಟಿ ಅವರುಗಳನ್ನು  ಆರಿಸಲಾಯಿತು.
      ಭಾರತೀಯ ಸೈನ್ಯಕ್ಕೆ ಸೇರಲು ಇಚ್ಚಿಸುವ ಯುವಕರಿಗಾಗಿ ಮೇ 15 ರಿಂದ ನಡೆಯುವ ಒಂದು ತಿಂಗಳ ಅವಧಿಯ ಉಚಿತ ಶಿಬಿರದಲ್ಲಿ ಭಾಗವಹಿಸವವರ ಆಯ್ಕೆ ಮೇ 8 ( ಬುಧವಾರ ) ಬೆಳಿಗ್ಗೆ 8.ಕ್ಕೆ  ಉಪ್ಪಳ ಕೊಂಡೆವೂರು ಆಶ್ರಮದಲ್ಲಿ ನಡೆಯಲಿದೆ. 10ನೇ ತರಗತಿ ಉತ್ತೀರ್ಣರಾದ 17 ರಿಂದ 22 ರವರೆಗೆ ಪ್ರಾಯದ ಕನಿಷ್ಠ ಪಕ್ಷ 152.5 ಸೆ.ಮೀ ಎತ್ತರವಿರುವ ದೇಶ ಭಕ್ತ ಯುವಕರಿಗೆ ಈ ಆಯ್ಕೆ ಪ್ರಕ್ರಿಯೆಯಲ್ಲಿ ತಮ್ಮ ದಾಖಲಾತಿಗಳೊಂದಿಗೆ ಹಾಜರಾಗಬಹುದೆಂದು ಅವೇಕ್ ಕಾಸರಗೋಡು ಪ್ರಕಟಣೆಯಲ್ಲಿ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries