HEALTH TIPS

ಪ್ರದರ್ಶನ ಅಥವಾ ರವಾನೆ ಸರಕುಗಳ ಮೇಲಿನ ಸಂಯೋಜಿತ ತೆರಿಗೆ ಐಜಿಎಸ್‍ಟಿ ರದ್ದು

 
    ನವದೆಹಲಿ: ಭಾರತದಿಂದ ವಸ್ತುಪ್ರದರ್ಶನಕ್ಕಾಗಿ ಅಥವಾ ಇತರ ಉತ್ಪನ್ನ ಪ್ರೋತ್ಸಾಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಒಯ್ಯುವ ವಸ್ತುಗಳ ಮೇಲೆ ಸಂಯೋಜಿತ ಸರಕು ಮತ್ತು ಸೇವಾ ತೆರಿಗೆ (ಇಂಟಿಗ್ರೇಟೆಡ್ ಜಿಎಸ್‍ಟಿ) ವಿಧಿಸಲಾಗುವುದಿಲ್ಲ ಎಂದು ಸರ್ಕಾರ ಸೋಮವಾರ ಸ್ಪಷ್ಟಪಡಿಸಿದೆ.
      ವಸ್ತುಪ್ರದರ್ಶನ ಅಥವಾ ಉತ್ಪನ್ನ ಪ್ರೋತ್ಸಾಹಕ್ಕೆಂದು ಸರಕುಗಳನ್ನು ವಿದೇಶಗಳಿಗೆ ಕೊಂಡೊಯ್ಯುವುದರಿಂದ ಅದನ್ನು ಜಿಎಸ್‍ಟಿ ಅಡಿ ಮಾರಾಟ ಎಂದು ಪರಿಗಣಿಸಲಾಗುವುದು, ಆ ಹಂತದಲ್ಲಿ ಅದು ಮಾರಾಟಕ್ಕಿಟ್ಟ ವಸ್ತುವಾಗಿರುತ್ತದೆಯೇ ಹೊರತು ಅದರ ಖರೀದಿಯಾಗಿರುವುದಿಲ್ಲ ಎಂದು ಕೇಂದ್ರ ಪರೋಕ್ಷ ತೆರಿಗೆ ಮತ್ತು ಅಬಕಾರಿ ಸುಂಕ ಮಂಡಳಿ (ಸಿಬಿಐಸಿ) ನೀಡಿರುವ ಹೇಳಿಕೆ ತಿಳಿಸಿದೆ.
   ರತ್ನಾಭರಣ ಸೇರಿದಂತೆ ಅನೇಕ ವಸ್ತುಗಳನ್ನು ಪ್ರದರ್ಶನಕ್ಕಾಗಿ ವಿದೇಶಗಳಿಗೆ ಕೊಂಡೊಯ್ದು ವಾಪಸ್ ಆಮದಾಗುವಾಗ ಐಜಿಎಸ್‍ಟಿ ವಿಧಿಸಲಾಗುತ್ತಿತ್ತು. ಇದಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ಕೈಗಾರಿಕೆಗಳು ಮತ್ತು ವ್ಯಾಪಾರ ಸಂಘಟನೆಗಳು ಹಣಕಾಸು ಸಚಿವಾಲಯವನ್ನು ಕೋರಿದ್ದವು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries