HEALTH TIPS

ಕುಂಟಾರು ಗಣೇಶೋತ್ಸವ ಸಮಿತಿ ಸಭೆ


        ಮುಳ್ಳೇರಿಯ: ಕುಂಟಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಮಹಾಸಭೆ ಶ್ರೀ ಅಯ್ಯಪ್ಪ ಭಜನಾ ಮಂದಿರ ಪರಿಸರದಲ್ಲಿ ಭಾನುವಾರ ನಡೆಯಿತು.
     ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರಕಾಶ.ಯಂ ಅಧ್ಯಕ್ಷತೆ ವಹಿಸಿದರು. ಮಾಜಿ ಅಧ್ಯಕ್ಷ ಗಂಗಾಧರ ಮಾಟೆಡ್ಕ, ಭಜನಾ ಮಂದಿರ ಸಮಿತಿ ಅಧ್ಯಕ್ಷ ಸುಧೀಶ್, ಕುಂಟಾರು ಶ್ರೀಕೃಷ್ಣ  ಲೀಲೋತ್ಸವ ಸಮಿತಿ ಅಧ್ಯಕ್ಷ ಜಯರಾಮ ಭಟ್.ಎಸ್, ರಾಘವೇಂದ್ರ ರಾವ್.ಎಚ್, ಗಣೇಶೋತ್ಸವ ಸಮಿತಿ ಕೋಶಾಧಿಕಾರಿ ಚಂದ್ರಶೇಖರ.ಕೆ ಉಪಸ್ಥಿತರಿದ್ದರು. 2019ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಸೆ.1ರಿಂದ 3 ರ ತನಕ ಈ ಸಾಲಿನ 38ನೇ ವರ್ಷದ ಸಾರ್ವಜನಿಕ ಶ್ರೀ ಗಣÉೀಶೋತ್ಸವವನ್ನು ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲು ತೀರ್ಮಾನಿಸಲಾಯಿತು.
     ಕಾರ್ಯದರ್ಶಿ ಲತೀಶ ಸ್ವಾಗತಿಸಿ, ನೂತನ ಸಮಿತಿ ಕಾರ್ಯದರ್ಶಿ ರಾಜೇಶ್.ಎಚ್ ವಂದಿಸಿದರು.
ನೂತನ ಪದಾಧಿಕಾರಿಗಳು- ರಕ್ಷಾಧಿಕಾರಿ: ಬ್ರಹ್ಮಶ್ರೀ ವಾಸುದೇವ ತಂತ್ರಿ, ಗೌರವಾಧ್ಯಕ್ಷರು: ಬ್ರಹ್ಮಶ್ರೀ ರವೀಶ ತಂತ್ರಿ, ಅಧ್ಯಕ್ಷ:ಪ್ರಕಾಶ.ಯಂ, ಉಪಾಧ್ಯಕ್ಷರು: ಯಾದವ ರಾವ್ ಗುರುಸ್ವಾಮಿ, ಗಂಗಾಧರ.ಯಂ, ಜಯರಾಮ ಭಟ್, ಮಹೇಶ ಆಚಾರ್ಯ, ಪ್ರಧಾನ ಕಾರ್ಯದರ್ಶಿ: ರಾಜೇಶ್.ಎಚ್, ಜೊತೆ ಕಾರ್ಯದರ್ಶಿಗಳು:  ಲತೀಶ, ಲಕ್ಷ್ಮೀಧರ, ಕೋಶಾಧಿಕಾರಿ: ಚಂದ್ರಶೇಖರ.ಕೆ,  ಸದಸ್ಯರು: ಶಿವಪ್ರಸಾದ.ಎಚ್, ಯತೀಶ.ಎಚ್, ಸದಾಶಿವ, ಜನಾರ್ದನ.ಕೆ, ಪ್ರಭಾಕರ ಗಾಳಿಮುಖ, ಭಾಸ್ಕರ.ಪಿ, ಜಗದೀಶ.ಸಿ, ಲೋಹಿತಾಕ್ಷ ಕುಂಟಾರು, ಸುಧೀಶ್.ಕೆ, ದಿಲೀಪ, ಮೋಹನ.ಎಚ್, ನಯನ ಅತ್ತನಾಡಿ, ಯೋಗೀಶ್, ಜಯಚಂದ್ರ, ಜಗದೀಶ್ ಮಾಸ್ತರ್, ಭಾಸ್ಕರ.ಎಂ, ಗಣೇಶ.ಕೆ, ರಂಜಿತ್ ಮತ್ತು ರಾಘವೇಂದ್ರ ರಾವ್.ಎಚ್.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries