HEALTH TIPS

ಭಾರತೀಯ ನಾಗರಿಕ ವಿಮಾನಗಳಿಗೆ ವಾಯು ಪ್ರದೇಶ ನಿಬರ್ಂಧ ತೆರವುಗೊಳಿಸಿದ ಪಾಕ್

       
      ನವದೆಹಲಿ: ಪಾಕಿಸ್ತಾನ ಗಡಿಯಲ್ಲಿ ಭಾರತ ನಿಯೋಜಿಸಿರುವ ಯುದ್ಧವಿಮಾನಗಳನ್ನು ಹಿಂಪಡೆಯುವವರೆಗೆ ತನ್ನ ವಾಯು ಪ್ರದೇಶದಲ್ಲಿ ಭಾರತದ ನಾಗರಿಕ ವಿಮಾನದ ಸಂಚಾರಕ್ಕೆ ಅವಕಾಶ ಕಲ್ಪಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದ ಪಾಕಿಸ್ತಾನ, ಈಗ ತನ್ನ ಹಠ ಸಡಿಲಿಸಿ, ವಾಯುಪ್ರದೇಶವನ್ನು ಎಲ್ಲಾ ರೀತಿಯ ನಾಗರಿಕ ಸಂಚಾರಕ್ಕೆ ಮುಕ್ತವಾಗಿಸುವುದಾಗಿ ಘೋಷಿಸಿದೆ.
       ಪಾಕಿಸ್ತಾನದ ಈ ನಿರ್ಧಾರವನ್ನು ಭಾರತದ ನಾಗರಿಕ ವಿಮಾನಯಾನ ಸಚಿವಾಲಯದ ಜಂಟಿ ಕಾರ್ಯದರ್ಶಿ ಉಷಾ ಪಿ ಸ್ವಾಗತಿಸಿದ್ದಾರೆ. 'ಇದು ಉತ್ತಮ ಸುದ್ದಿ. ಇದರಿಂದ ವಿಮಾನ ಪ್ರಯಾಣಿಕರಿಗೆ ಅನುಕೂಲವಾಗಲಿದೆ' ಎಂದು ಅವರು ಟ್ವೀಟ್ ಮಾಡಿದ್ದಾರೆ.
      ಇದರಿಂದ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ನೆರವಾಗಲಿದೆ. ಇತ್ತೀಚೆಗಷ್ಟೇ ಅಮೆರಿಕದ ಏರ್ ಲೈನ್ಸ್ ಸಂಸ್ಥೆ, ಪಾಕಿಸ್ತಾನದ ವಾಯು ಪ್ರದೇಶದ ನಿಬರ್ಂಧದ ಹಿನ್ನೆಲೆಯಲ್ಲಿ ಅಕ್ಟೋಬರ್ 26ರವರೆಗೆ ಅಮೆರಿಕದಿಂದ ದೆಹಲಿ ಹಾಗೂ ಮುಂಬೈಗೆ ಪ್ರಯಾಣಿಸುವ ವಿಮಾನ ಸಂಚಾರವನ್ನು ರದ್ದುಗೊಳಿಸುವುದಾಗಿ ಪ್ರಕಟಿಸಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries