HEALTH TIPS

ಗುರುಪೂರ್ಣಿಮೆ: ಪೇಜಾವರ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದ ಪಿಎಂ ಮೋದಿ

   
       ನವದೆಹಲಿ: ಗುರುಪೂರ್ಣಿಮೆ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಉಡುಪಿ ಪೇಜಾವರ ಮಠದ ಹಿರಿಯ ಗುರುಗಳಾದ ತಮ್ಮ ಪ್ರೀತಿಯ ಆಧ್ಯಾತ್ಮಿಕ ಗುರು ವಿಶ್ವೇಶ ತೀರ್ಥ ಸ್ವಾಮಿಯನ್ನು ಭೇಟಿಯಾದರು.
      ತಾವು ಶ್ರೀಗಳನ್ನು ಭೇಟಿಯಾದ  ಕುರಿತು ಮೋದಿ ತಮ್ಮ ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಇಂದಿನ ದಿನ ಗುರುಪೂರ್ಣಿಮಾ ಆಗಿದ್ದು ವಿಶೇಷ ದಿನವಾಗಿದೆ, ಇದು ನನ್ನ ಪಾಲಿಗೆ ಇನ್ನಷ್ಟು ವಿಶೇಷವಾಗಿದೆ.ಗುರುಪೂರ್ಣಿಮೆಯ ಶುಭ ಸಮಯದಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಗಳ ಜತೆಗೆ ಸಮಯ ಕಳೆಯುವ ಸುವರ್ಣಾವಕಾಶ ಲಭಿಸಿದೆ.
       "ಅವರ ಮಾತುಗಳನ್ನು ಕೇಳಿ ಅವರಿಂದ ಕಲಿಯುವುದು ಸಾಕಷ್ಟಿದೆ. ಅವರ ಆಲೋಚನೆಗಳನ್ನು ಕೇಳುವುದು ಒಂದು ವಿಶೇಷ ಅನುಭವ" ಮೋದಿ ಟ್ವೀಟ್ ಮಾಡಿ ಹೇಳಿದ್ದಾರೆ.
   
A special day made even more special.

On the blessed occasion of , had the honour of spending time with Sri Vishvesha Teertha Swamiji of the Sri Pejawara Matha, Udupi.

Learning from him and hearing his thoughts is a very humbling experience.
      ಮದ್ವಾಚಾರ್ಯರು ಸ್ಥಾಪಿಸಿದ  ದ್ವೈತ ಸಿದ್ದಾಂತದ  ಅಷ್ಟ ಮಠಗಳಲ್ಲಿ ಒಂದಾದ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಬೆಂಗಳೂರಿನಲ್ಲಿ ಪೂರ್ಣಪ್ರ ಜ್ಞ  ವಿದ್ಯಾಪೀಠದ ಸ್ಥಾಪಕರಾಗಿದ್ದಾರೆ, ಅಲ್ಲಿ ವೇದಾಂತದ ಬಗ್ಗೆ ಅನೇಕ ವಿದ್ವಾಂಸರಿಗೆ ತರಬೇತಿ ನೀಡಲಾಗುತ್ತದೆ. 88 ವರ್ಷದ ಸ್ವಾಮೀಜಿಯನ್ನು "ರಾಷ್ಟ್ರದ ಸನ್ಯಾಸಿ" ಎಂದೂ  ಒಬ್ಬ ಮಹಾನ್ ಸಾಮಾಜಿಕ ಸುಧಾರಕ ಮತ್ತು ರಾಷ್ಟ್ರೀಯವಾದಿ ಎಂದು ಕರೆಯಲಾಗುತ್ತದೆ.
      ಮೋದಿ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರ ವಹಿಸಿಕೊಂಡ ಬಳಿಕ ಸ್ವಾಮೀಜಿ ಅವರನ್ನು ಕರೆದು ಧೈರ್ಯ ಮತ್ತು ಸಹಾನುಭೂತಿಯಿಂದ ಜನರಿಗೆ ಸೇವೆ ಸಲ್ಲಿಸುವಂತೆ ಆಶೀರ್ವದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries