ಕಾಸರಗೋಡು: ಬಿರುಸಿನ ಮಳೆಯಿಂದ ವಿವಿಧ ರೀತಿಯ ಸಂಕಷ್ಟ ಅನುಭವಿಸಿದ ಸಂತ್ರಸ್ತರ ಕಣ್ಣೀರೊರೆಸಲು ಜಿಲ್ಲೆಯ ಸಹೃದಯರು ಬೇರೆ ಬೇರೆ ವಿಧಾನ ಅನುಸರಿಸುತ್ತಿದ್ದಾರೆ. ಕುತ್ತಿಕೋಲು ನಿವಾಸಿ ಎ.ಪ್ರಿಯಾ ಕುಮಾರಿ ಅವರ ಸಹೃದಯತೆಯೂ ಈ ನಿಟ್ಟಿನಲ್ಲಿ ಗಮನ ಸೆಳೆದಿದೆ.
ಜಿಲ್ಲಾಡಳಿತದ ದುರಂತ ನಿವಾರಣೆಗೆ ತಮ್ಮ ಸ್ವಾಮ್ಯದ 10 ಸೆಂಟ್ಸ್ ಜಾಗವನ್ನು ಉದಾರವಾಗಿ ದೇಣಿಗೆ ನೀಡುವ ಮೂಲಕ ಇವರು ಮಾನವೀಯ ಮೌಲ್ಯ ಮೆರೆದಿದ್ದಾರೆ.
ಮುಳಿಯಾರು ಪಂಚಾಯತ್ ನಲ್ಲಿ ಪಾಲಿಯೇಟಿವ್ ನರ್ಸ್ ಆಗಿರುವ ಇವರು ಸಂತ್ರ್ಸತರ ಸಂಕಷ್ಟಕ್ಕೆ ತಮ್ಮ ಬೂದಾನವೂ ಒಂದು ಸಾಂತ್ವನ ಸ್ಪರ್ಶ ಎಂದು ಕೊಂಡಿದ್ದಾರೆ. ಕುತ್ತಿಕೋಲು ಗ್ರಾಮಪಂಚಾಯತ್ ನಲ್ಲಿ ತಮ್ಮ ಹೆಸರಲ್ಲಿರುವ 92 ಸೆಂಟ್ಸ್ ಜಾಗದಲ್ಲಿ 10 ಸೆಂಟ್ಸ್ ಜಾಗವನ್ನು ಅವರು ಕೊಡುಗೆ ರೂಪದಲ್ಲಿ ಹಸ್ತಾಂತರಿಸಿದ್ದಾರೆ. ಪತಿ ರವೀಂದ್ರ ಕೆ.ಎಸ್.ಇ.ಬಿ. ಸಿಬ್ಬಂದಿಯಾಗಿದ್ದು,ಇವರ ಇಬ್ಬರ ಮಕ್ಕಳು ಕಲಿಕೆ ನಡೆಸುತ್ತಿದ್ದಾರೆ. ಇವರೂ ಪ್ರಿಯಾಕುಮಾರಿ ಅವರ ಸಹೃದಯತೆಗೆ ಬೆಂಬಲ ನೀಡಿದ್ದಾರೆ.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಎನ್.ಎ.ನಲ್ಲಿಕುನ್ನು ಅವರಿಗೆ ಪ್ರಿಯಾಕುಮಾರಿ ಜಗದ ದಾಖಲೆಪತ್ರ ಹಸ್ತಾಂತರಿಸಿದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಹೆಚ್ಚುವರಿ ದಂಡನಧಿಕಾರಿ ಎನ್.ದೇವಿದಾಸ್, ಸಿ.ಡಿ.ಸಿ.ಅಧ್ಯಕ್ಷೆ ನ್ಯಾಯವಾದಿ ಪಿ.ಪಿ.ಶ್ಯಾಮಲಾದೇವಿ ಮೊದಲಾದವರು ಉಪಸ್ಥಿತರಿದ್ದರು.
(ಚಿತ್ರ ಮಾಹಿತಿ: ಪ್ರಿಯಾಕುಮಾರಿ: ಜಿಲ್ಲಾಡಳಿತದ ದುರಂತ ನಿವಾರಣೆ ನಿಧಿಗೆ ದೇಣಿಗೆಯಾಗಿ ಶಾಸಕ ಎನ್.ಎ.ನೆಲ್ಲಿಕುನ್ನು ಅವರಿಗೆ 10 ಸೆಂಟ್ಸ್ ಜಾಗದ ದಾಖಲೆ ಪತ್ರ ಹಸ್ತಾಂತರಿಸಿದ ಪ್ರಿಯಾಕುಮಾರಿ)

