HEALTH TIPS

ಇನ್ನು ವಿದ್ಯಾರ್ಥಿಗಳು ಹಸಿದಿರಬಾರದು- "ಮಧುರಂ ಪ್ರಭಾತಂ" ಯೋಜನೆ ಆರಂಭ


   ಕಾಸರಗೋಡು: ಇನ್ನು ಮುಂದೆ ಹಸಿದ ವಿದ್ಯಾರ್ಥಿಗಳು ಇರುವುದಿಲ್ಲ ಎಂಬ ಸಂದೇಶದೊಂದಿಗೆ "ಮಧುರಂಪ್ರಭಾತಂ" ಯೋಜನೆ ಜಿಲ್ಲೆಯಲ್ಲಿ ಜಾರಿಗೊಂಡಿದೆ.
        ಜಿಲ್ಲಾ ಶಿಶು ಸಂರಕ್ಷಣೆ ಕಚೇರಿ, ಜಿಲ್ಲಾ ಶಿಕ್ಷಣ ಇಲಾಖೆ ಜಂಟಿ ವತಿಯಿಂದ ಜಾರಿಗೊಳಿಸಲಾಗುವ "ಮಧುರಂ ಪ್ರಭಾತಂ" ಯೋಜನೆ ಆರಂಭಗೊಂಡಿದೆ.
    ಶಾಲೆಗಳ ಬಳಿಯ ಹೋಟೆಲ್ ಗಳು, ಹೋಟೆಲ್ ಆಂಡ್ ರೆಸ್ಟಾರೆಂಟ್ ಅಸೋಸಿಯೆಶನ್, ವ್ಯಾಪಾರಿ ವ್ಯವಸಾಯಿ ಸಂಘಟನೆಗಳು, ಶಿಕ್ಷಕ-ರಕ್ಷಕ ಸಂಘಟನೆಗಳು ಸಹಿತ ಸಾರ್ವಜನಿಕ ಸಹಭಗಿತ್ವದ ಯೋಜನೆ ಈ ಮೂಲಕ ಜಾರಿಯಾಗಿದೆ. ಯೋಜನೆಯ ಮುಖಂತರ 1600 ವಿದ್ಯಾರ್ಥಿಗಳಿಗೆ ಬೆಳಗ್ಗಿನ ಉಪಹಾರ ಉಚಿತವಾಗಿ ಲಭಿಸಲಿದೆ. ಸುಮಾರು 400 ವಿದ್ಯಾರ್ಥಿಗಳಿಗೆ ಈ ಯೋಜನೆ ಪ್ರಕಾರ ಜೂನ್ ತಿಂಗಳಿಂದಲೇ ಈ ಸೌಲಭ್ಯ ದೊರೆಯುತ್ತಿದೆ. ಜೊತೆಗೆ 550 ಮಕ್ಕಳಿಗೆ ಬೆಳಗ್ಗಿನ ಉಪಹಾರಕ್ಕಾಗಿ ಪ್ರಾಯೋಜನಕರು ಲಭಿಸಿದ್ದಾರೆ. ಆ.31ರ ಮುಂಚಿತವಾಗಿ ಉಳಿದಿರುವ ಶಾಲೆಗಳ ಮಕ್ಕಳಿಗಾಗಿ ಪ್ರಾಯೋಜನಕರನ್ನು ಪತ್ತೆಮಾಡಿ, ಸೆಪ್ಟೆಂಬರ್ 31ರ ಮುಂಚಿತವಾಗಿ ಬೆಳಗ್ಗಿನ ಉಪಹಾರ ಒದಗಿಸಲಾಗುವುದು.
    ಫಲಾನುಭವಿಗಳಾದ ಮಕ್ಕಳ ಮಾಹಿತಿಯನ್ನು ಶಾಲಾ ಮುಖ್ಯಶಿಕ್ಷಕರಲ್ಲದೇ ಉಳಿದವರು ತಿಳಿಯದಂತೆ ಗುಪ್ತವಾಗಿರಿಸಲಾಗುವುದು. ಶಾಲೆಗಳಿಂದ ನೀಡಲಾಗುವ ಟೋಕನ್ ಮೂಲಕ ಹೋಟೆಲ್ ಗಳಿಂದ ಬೆಳಗ್ಗಿನ ಉಪಹಾರ ಒದಗಿಸಲಾಗುವುದು. ಇದಲ್ಲದೆ ಶಿಕ್ಷಕರು, ರಕ್ಷಕ-ಶಿಕ್ಷಕ ಸಂಘ, ಸಾರ್ವಜನಿಕರು ಸೇರಿ ವಿದ್ಯಾರ್ಥಿಗಳಿಗೆ ಬೇಕಾದ ಬೆಳಗ್ಗಿನ ಆಹಾರ ಸಿದ್ಧಪಡಿಸುವ ವ್ಯವಸ್ಥೆಯೂ ಇದೆ. ಸಂಸ್ಥೆಗಳು, ವ್ಯಕ್ತಿಗಳು, ವ್ಯಾಪಾರ ಸಂಘಟನೆಗಳು, ಕುಟುಂಬಶ್ರೀ ವ್ಯವಸ್ಥೆ, ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು, ಸಾರ್ವಜನಿಕರು ಮೊಲಾದವರ ಬೆಂಬಲದೊಂದಿಗೆ ಪ್ರಾಯೋಜಕರನ್ನು ಪತ್ತೆಮಾಡಲಾಗುತ್ತಿದೆ.
                ನೀವೂ ಪ್ರಾಯೋಜಕರಾಗಬಹುದುಃ
     "ಮಧುರಂ ಪ್ರಭಾತಂ" ಯೋಜನೆ ಪ್ರಕಾರ ಶಾಲಾ ವಿದ್ಯಾರ್ಥಿಗಳಿಗೆ ಬೆಳಗ್ಗಿನ ಉಪಹಾರ ಒದಗಿಸುವ ನಿಟ್ಟಿನಲ್ಲಿ ಪ್ರಾಯೋಜಕತ್ವವನ್ನು ವಹಿಸಿಕೊಳ್ಳಲು ಅವಕಾಶಗಳಿವೆ. ಒಬ್ಬ ವಿದ್ಯರ್ಥಿಗೆ ಒಂದು ವರ್ಷ ಅವಧಿಗೆ ಚಟುವಟಿಕೆಯ ದಿನಗಳಲ್ಲಿ ಬೆಳಗ್ಗಿನ ಉಪಹಾರ ಒದಗಿಸುವ ನಿಟ್ಟಿನಲ್ಲಿ 5 ಸಾವಿರ ರೂ. ವೆಚ್ಚ ಗಣನೆ ಮಡಲಾಗಿದೆ. ಪ್ರಾಯೋಜಕತ್ವ ವಹಿಸಿಕೊಳ್ಳಲು ಸಿದ್ಧರಾಗಿರುವ ಸಹೃದಯರು ಜಿಲ್ಲಾ ಶಿಶು ಕಲ್ಯಾಣ ಸಮಿತಿ ಕಾರ್ಯದರ್ಶಿ(9447649957), ಜಿಲ್ಲಾ ಶಿಶು ಸಂರಕ್ಷಣೆ ಅಧಿಕಾರಿ(9447580121) ಇವರನ್ನು ಸಂಪರ್ಕಿಸಬಹುದು. 
                   ಮಧುರಂ ಪ್ರಭಾತಂ ಯೋಜನೆಯ ಉದ್ಘಾಟನೆ :
     ಯೋಜನೆಯ ಉದ್ಘಾಟನೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು. ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. 541 ಮಕ್ಕಳಿಗಿರುವ ಆಹಾರದ ಟೋಕನ್ ಗಳನ್ನು ವಿವಿಧ ಸಹಾಯಕ ಶಿಕ್ಷಣಾಧಿಕಾರಿಗಳ ಮೂಲಕ ವಿವಿಧ ಶಾಲೆಗಳ ಮುಖ್ಯಶಿಕ್ಷಕರಿಗೆ ಹಸ್ಥಾಂತರಿಸಲಾಗಿದೆ.
      ಹೆಚ್ಚುವರಿ ದಂನಾಧಿಕಾರಿ ಎನ್.ದೇವಿದಾಸ್, ಸಿ.ಡಿ.ಸಿ. ಅಧ್ಯಕ್ಷೆ ನ್ಯಾಯವಾದಿ ಪಿ.ಪಿ.ಶ್ಯಾಮಲಾದೇವಿ, ಚೆಂಗಳ ಗ್ರಾಮಪಂಚಾಯತ್ ಅಧ್ಯಕ್ಷೆ ಶಾಹಿನ ಸಲೀಂ, ಜಿಲ್ಲಾ ಶಿಶು ಸಂರಕ್ಷಣೆ ಅಧಿಕಾರಿ ಸಿ.ಎ.ಬಿಂದು, ಜಿಲ್ಲಾ ವಾರ್ತಾ ಅಧಿಕಾರಿ ಎಂ.ಮಧುಸೂದನನ್, ಕುಟುಂಬಶ್ರೀ ಜಿಲ್ಲಾ ಸಂಚಾಲಕ ಟಿ.ಟಿ.ಸುರೇಂದ್ರನ್, ಜಿಲ್ಲಾ ಶಿಕ್ಷಣಧಿಕಾರಿಗಳಾದ ನಂದಿಕೇಶ ಮಾಸ್ಟರ್, ಸರಸ್ವತಿ ಟೀಚರ್, ಜಿಲ್ಲಾ ಶಿಶು ಕಲ್ಯಾಣ ಸಮಿತಿ ಕಾರ್ಯಕಾರಿ ಸದಸ್ಯ ಅಜಯನ್ ಪನೆಯಾಲ್ ಮೊದಲಾದವರು ಉಪಸ್ಥಿತರಿದ್ದರು. ಶಿಶು ಕಲ್ಯಾಣ ಸಮಿತಿ ಅಧ್ಯಕ್ಷರು, ಶಾಲಾ ಆಡಳಿತೆ ಸಮಿತಿ ಸದಸ್ಯರು, ಸಿಬ್ಬಂದಿ, ಸಾರ್ವಜನಿಕರು ಬಾಗವಹಿಸಿದರು. 
            (ಚಿತ್ರ ಮಾಹಿತಿ: ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು "ಮಧುರಂ ಪ್ರಭಾತಂ" ಯೋಜನೆ ಉದ್ಘಾಟಿಸಿದರು.) 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries