ಬದಿಯಡ್ಕ: ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ನೇತೃತ್ವದಲ್ಲಿ 15 ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವವು ಸ.2 ರಮದು ವಿವಿಧ ಕಾರ್ಯಕ್ರಮಗಳೊಂದಿಗೆ ನೀರ್ಚಾಲು ಅಶ್ವತ್ಥಕಟ್ಟೆ ಪರಿಸರದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಸೆ.2 ರಂದು ಬೆಳಿಗ್ಗೆ 7 ಕ್ಕೆ ದೀಪ ಪ್ರತಿಷ್ಠೆ, 7.30ಕ್ಕೆ ಗಣಪತಿ ಹವನ, 10.30 ರಿಂದ ಪುತ್ತೂರು ಡೊಡ್ಡಡ್ಕದ ಶ್ರೀಮಹಾಲಕ್ಷ್ಮೀ ಭಜನಾ ಮಮಡಳಿಯವರಿಂದ ವಿಶೇಷ ನೃತ್ಯ ಭಜನಾ ಕಾರ್ಯಕ್ರಮ, 12ಕ್ಕೆ ಸತ್ಯವಿನಾಯಕ ಪೂಜೆ, 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, 1 ರಿಂದ ಪ್ರಸಾದ ಭೋಜನ, 1 ರಿಂದ 3ರ ವರೆಗೆ ಸುಧಾಕರ ಕೋಟೆಕುಂಜತ್ತಾಯ ಅವರಿಂದ ಭಕ್ತ ಮಾರ್ಕಂಡೇಯ ಹರಿಕಥಾ ಸತ್ಸಂಗ, ಅಪರಾಹ್ನ 3.15 ರಿಂದ ಧಾರ್ಮಿಕ ಸಭೆ ನಡೆಯಲಿದೆ. ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಅಧ್ಯಕ್ಷ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸುವರು. ಶಿಕ್ಷಕ ಪ್ರಸಾದ್ ಮಾಸ್ತರ್ ಏಣಿಯರ್ಪು ಧಾರ್ಮಿಕ ಭಾಷಣ ಮಾಡುವರು. ಕರ್ನಾಟಕ ಪಿಯು ಶಿಕ್ಷಣದಲ್ಲಿ ಪ್ರಥಮ ರ್ಯಾಂಕ್ ವಿಜೇತ ಶ್ರೀಕೃಷ್ಣ ಕಡಪ್ಪು ಅವರನ್ನು ಈ ಸಂದರ್ಭ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಈ ಸಂದರ್ಭ ಸನ್ಮಾನಿಸಿ ಗೌರವಿಸಲಾಗುವುದು. ಜೊತೆಗೆ ವೈದಿಕ ಕ್ಷೇತ್ರದ ವಿಶೇಷ ಸಾಧನೆ ಪರಿಗಣಿಸಿ ವೇದಮೂರ್ತಿ ಶಂಕರನಾರಾಯಣ ಭಟ್ ಪಾಂಡೇಲು ಹಾಗೂ ಧಾರ್ಮಿಕ ಮುಂದಾಳು ತಿಮ್ಮಪ್ಪ ಪಾಟಾಳಿ ಅವರನ್ನು ಈ ಸಂದರ್ಭ ಗೌರವಿಸಲಾಗುವುದು. ನೀರ್ಚಾಲು ಶಾಲೆಯ 2018-19ನೇ ಸಾಲಿನ ಹತ್ತನೇ ತರಗತಿಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಗುವುದು. ಸಂಜೆ 6.30 ರಿಂದ ವಿದುಷಿಃ ವಿದ್ಯಾಲಕ್ಷ್ಮೀ ಬೇಳ ಅವರ ಶಿಷ್ಯವೃಂದವರಿಂದ ನೃತ್ಯ ಸಂಭ್ರಮ ನಡೆಯಲಿದೆ.


