ಕಾಸರಗೋಡು: ಪಾರೆಕಟ್ಟೆಯ ಶ್ರೀ ಮುತ್ತಪ್ಪ ಮಹಿಳಾ ಭಕ್ತ ವೃಂದ ರಾಮಾಯಣ ಮಾಸದ ಮನೆ ಮನೆ ಭಜನಾ ಕಾರ್ಯಕ್ರಮವು ಕರ್ಕಾಟಕ ಮಾಸದಿಂದ ಆರಂಭಗೊಂಡು ಸಿಂಹ ಮಾಸದ ವರೆಗೆ ನಡೆಸಿ ಸಮಾರೋಪ ಕಾರ್ಯಕ್ರಮವು ಪಾರೆಕಟ್ಟೆಯ ಶ್ರೀ ಮುತ್ತಪ್ಪ ಮಡಪ್ಪುರದಲ್ಲಿ ಜರಗಿತು.
ಸಭಾ ಕಾರ್ಯಕ್ರಮವನ್ನು ಭಜನಾ ಗುರುಗಳಾದ ಜಯಾನಂದ ಕುಮಾರ್ ಹೊಸದುರ್ಗ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸುರೇಂದ್ರ ಎಂಜಿನಿಯರ್ ಅಧ್ಯಕ್ಷತೆ ವಹಿಸಿದರು. ಇದೇ ಸಂದರ್ಭದಲ್ಲಿ ಜಯಾನಂದ ಕುಮಾರ್ ಹೊಸದುರ್ಗ ಅವರಿಗೆ ಶಿಷ್ಯರಿಂದ ಗುರುವಂದನೆ ನಡೆಯಿತು. ಮುಖ್ಯ ಅತಿಥಿಗಳಾಗಿ ಕ್ಷೇತ್ರದ ಅಧ್ಯಕ್ಷ ರಘುವೀರ ಶೆಟ್ಟಿ, ಜನರಲ್ ಆಸ್ಪತ್ರೆಯ ಆರೋಗ್ಯ ವಿಭಾಗದ ನಿವೃತ್ತ ಮೋಹನ ಆಚಾರ್ಯ, ಕ್ಷೇತ್ರ ಸಮಿತಿ ಸದಸ್ಯ ವಾಸು ಪಾರೆಕಟ್ಟೆ, ಅಚ್ಚುತ ಪಾರೆಕಟ್ಟೆ, ರತೀಶ್, ಮೋಹನ್ ಕಾಂತ ಮೊದಲಾದವರು ಉಪಸ್ಥಿತರಿದ್ದರು.
ಭಜನಾ ಸಂಘದ ಸದಸ್ಯೆ ಸೌಜನ್ಯ ಮನೋಜ್ ಸ್ವಾಗತಿಸಿದರು. ಆಶಾ ಕುಮಾರಿ ಉಮೇಶ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ಅಧ್ಯಕ್ಷೆ ನೇತ್ರಾವತಿ ಯೋಗೀಶ್ ವಂದಿಸಿದರು.


