ಪೆರ್ಲ:ಯಕ್ಷsಸ್ನೇಹಿ ಬಳಗ ಸ್ವರ್ಗ ಮತ್ತು ಶೇಣಿ ರಂಗ ಜಂಗಮ ಟ್ರಸ್ಟ್ ಆಶ್ರಯದಲ್ಲಿ ಆ.15 ರಂದು ಮಧ್ಯಾಹ್ನ 2ರಿಂದ ಸ್ವರ್ಗ ಶಾಲಾ ಸಭಾ ಭವನದಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷ-ಗಾನ ವೈಭವ ನಡೆಯಲಿದೆ.
ಶೇಣಿ ವೇಣುಗೋಪಾಲ ಭಟ್, ಭಾಗವತಿಕೆ ಸತೀಶ್ ಪುಣಿಚಿತ್ತಾಯ, ತೆಂಕು-ಬಡಗು ಖ್ಯಾತಿಯ ಸತ್ಯನಾರಾಯಣ ಪುಣಿಚಿತ್ತಾಯ, ಅಮೃತಾ ಅಡಿಗ ಪಾಣಾಜೆ, ಚೆಂಡೆ ಶ್ರೀಧರ ಎಡಮಲೆ, ಸ್ಕಂದ ಕೊನ್ನಾರ್, ಮದ್ದಳೆ ಅನೂಪ್ ಸ್ವರ್ಗ, ಚಕ್ರತಾಳದಲ್ಲಿ ಸಮೃದ್ಧ ಪುಣಿಚಿತ್ತಾಯ ಸಹಕರಿಸುವರು.
ಯಕ್ಷಗಾನ ಪೋಷಕ ವೆಂಕಟೇಶ್ ಪಾಲ್ತಮೂಲೆ ಸಭಾ ಕಾರ್ಯಕ್ರಮ ಉದ್ಘಾಟಿಸುವರು. ನಿವೃತ್ತ ಶಿಕ್ಷಕ ಶ್ರೀಧರ್ ಭಟ್ ಕೆದಂಬಾಯಿಮೂಲೆ ಅಧ್ಯಕ್ಷತೆ ವಹಿಸುವರು.ಯಕ್ಷಗಾನ ಕಲಾವಿದ, ಸಂಘಟಕ, ಶೇಣಿ ವೇಣುಗೋಪಾಲ ಭಟ್, ಶಾಲಾ ಪ್ರಬಂಧಕ ಹೃಷಿಕೇಶ್ ಭಟ್, ಮುಖ್ಯ ಶಿಕ್ಷಕಿ ಗೀತಾ ಕುಮಾರಿ ಬಿ.ಉಪಸ್ಥಿತರಿರುವರು.

