ಪೆರ್ಲ:ಶೇಣಿ ರಂಗಜಂಗಮ ಟ್ರಸ್ಟ್ ಕಾಸರಗೋಡು ಹಾಗೂ ಯಕ್ಷಸ್ನೇಹಿ ಬಳಗದಿಂದ ಪೆರ್ಲ ಶ್ರೀಸತ್ಯನಾರಾಯಣ ಮಂದಿರದಲ್ಲಿ ಆ.16ರಿಂದ 18ರ ವರೆಗೆ ಪ್ರತಿ ದಿನ ಸಂಜೆ ಯಕ್ಷಗಾನ ತಾಳ ಮದ್ದಳೆ ನಡೆಯಲಿದೆ.
ಆ.16ರಂದು ಅಪರಾಹ್ನ 3 ಕ್ಕೆ ಉದ್ಘಾಟನೆ, 4ರಿಂದ ಪುತ್ತೂರು ಧೀಶಕ್ತಿ ಮಹಿಳಾ ಬಳಗದಿಂದ ತಾಳ ಮದ್ದಳೆ, 17ರಂದು ಅಪರಾಹ್ನ 3ಕ್ಕೆ ಪ್ರಸಿದ್ದ ಕಲಾವಿದರ ಕೂಡುವಿಕೆಯಿಂದ ಅಭಿಮನ್ಯು ಕಾಳಗ, 18 ರಂದು ಅಪರಾಹ್ನ 3 ರಿಂದ ಪ್ರಸಿದ್ದ ಕಲಾವಿದರ ಕೂಡುವಿಕೆಯಿಂದ ಅತಿಕಾಯ ಮೋಕ್ಷ ತಾಳಮದ್ದಳೆ ನಡೆಯಲಿದೆ.

