ಕಾಸರಗೋಡು: ಕನ್ನಡ ಹೋರಾಟ ಸಮಿತಿ ಸಭೆ ಆ.15 ರಂದು ಮಧ್ಯಾಹ್ನ 2.30 ಕ್ಕೆ ಬ್ಯಾಂಕ್ ರಸ್ತೆಯ ಜನಾರ್ಧನ ಆಸ್ಪತ್ರೆಯ ಎದುರುಗಡೆಯ ಕಾಸರಗೋಡು ಟ್ಯುಟೋರಿಯಲ್ ಕಾಲೇಜಿನಲ್ಲಿ ಜರಗಲಿದೆ. ಕನ್ನಡಿಗರ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಿ ಮುಂದೆ ಹೋರಾಟದ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಗುವುದು.
ಕನ್ನಡ ಭಾಷಾಭಿಮಾನಿಗಳು, ಕನ್ನಡ ಅಧ್ಯಾಪಕರು, ಅಂಗನವಾಡಿ ಅಧ್ಯಾಪಕಿಯರು, ಇನ್ನಿತರ ಉದ್ಯೋಗಾರ್ಥಿಗಳು, ಕನ್ನಡ ಪರ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಕನ್ನಡ ಹೋರಾಟ ಸಮಿತಿಯ ಪದಾಧಿಕಾರಿಗಳು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

