ಉಪ್ಪಳ: ಕಡಲ ತೀರದ ಗಡಿಯನ್ನು ಉಲ್ಲಂಘಿಸಿರುವುದಾಗಿ ಆರೋಪಿಸಿ ಉಪ್ಪಳ, ಕುಂಬಳೆ, ಕಾಸರಗೋಡು ನಿವಾಸಿಗಳ ಸಹಿತ 23 ಭಾರತೀಯರನ್ನೊಳಗೊಂಡ ಹಡಗೊಂದನ್ನು ಇಂಡೋನೇಷ್ಯಾ ನೌಕಾ ಸೇನೆ ವಶಕ್ಕೆ ತೆಗೆದು ಅದರಲ್ಲಿದ್ದ ನೌಕರರ ಪೈಕಿ 10 ಮಂದಿಯನ್ನು ಬಿಡುಗಡೆಗೊಳಿಸಿದೆ.
ಉಪ್ಪಳ ಪಾರೆಕಟ್ಟೆ ನಿವಾಸಿ ಪಿಕೆ ಮೊಹಮ್ಮದ್ ಎಂಬವರ ಪುತ್ರ ಪಿ ಕೆ ಮೂಸಾ ಕುಂಞÂ್ಞ, ಪಾಲಕ್ಕಾಡ್ ಜಿಲ್ಲೆಯ ವೆರಿಂಜಿರ ನಿವಾಸಿ ವಿಪಿನ್ ರಾಜ್ ಎಂಬಿವರನ್ನೊಳಗೊಂಡ ಹತ್ತು ಮಂದಿ ನಾಡಿಗೆ ಸುರಕ್ಷಿತವಾಗಿ ತಲುಪಿದ್ದಾರೆ.
ಕೇರಳದವರು ಎರಡು ಮಂದಿಯಾದರೆ ಉಳಿದವರು ಉತ್ತರ ಭಾರತದವರಾಗಿದ್ದರು. ಕಳೆದ ಆರು ತಿಂಗಳಿನಿಂದ ಬಂಧಿಯಾಗಿದ್ದ ಭಾರತೀಯರ ದುರಂತ ಕತೆಯನ್ನು ಮಾಧ್ಯಮಗಳು ಬೆಳಕಿಗೆ ತಂದೆಬಳಿಕ ಅಧಿಕಾರಿಗಳ ಹಾಗೂ ಮಂತ್ರಿಗಳ ಕಣ್ತೆರೆದು ಇದೀಗ ಬಿಡುಗಡೆಯ ಭಾಗ್ಯ ಕೂಡಿಬಂತು. ನಿರಂತರ ಸುದ್ದಿಯ ಪರಿಣಾಮವಾಗಿ ನಾವು ಭಾರತಕ್ಕೆ ತಲುಪಲು ಸಾಧ್ಯಾವಾಯಿತು ಎಂದು ಮೂಸಾ ಕುಂಞÂ ಅವರು ವಿಜಯವಾಣಿಗೆ ಪ್ರತಿಕ್ರಿಯಿಸಿದ್ದಾರೆ.
ಈ ಕಳೆದ ಫೆಬ್ರವರಿ 8 ಕ್ಕೆ ಸಿಂಗಾಪುರಕ್ಕೆ ಸಮೀಪದಲ್ಲಿ ಇಂಡೋನೇಷ್ಯಾ ನೌಕಾ ಸೇನೆ ಹಡಗನ್ನು ವಶಕ್ಕೆ ತೆಗೆದಿತ್ತು. ಎರಡು ವರ್ಷಗಳಿಗೊಮ್ಮೆ ನಡೆಸುವ ಹಡಗಿನ ದರಸ್ಥಿ ಕಾರ್ಯ ಮುಗಿದ ಬಳಿಕ ಸಿಂಗಾಪುರ ಬಂದರಿನಲ್ಲಿ ಸರಕುಗಳನ್ನು ಹೇರುತ್ತಿರುವ ಮಧ್ಯೆ ಭಾರತೀಯರಿರುವ ಎಂ ಟಿ ಎಸ್ ಜಿ ವೇಗಸ್ ಆಂಗೋ ಈಸ್ಟನ್ ಶಿಪ್ಪಿಂಗ್ ಕಂಪನಿಯ ಹಡಗನ್ನು ಇಂಡೋನೇಷ್ಯಾ ನೌಕಾ ಸೇನೆ ವಶಕ್ಕೆ ತೆಗೆದಿತ್ತು. ಸುಮಾರು 23 ಮಂದಿ ಭಾರತೀಯರು ಬಂಧಿಯಾಗಿದ್ದರು.
ಎಮಿಗ್ರೇಷನ್ ಹಾಗೂ ಸುರಕ್ಷಾ ಕಾನೂನನ್ನು ಉಲ್ಲಂಘಿಸಿರುವುದಾಗಿ ಆರೋಪಿ ಇಂಡೋನೆಷ್ಯಾ ನೌಕಾ ಸೇನಾ ಅಧಿಕಾರಿಗಳು ಹಡಗನ್ನು ಬಿಟ್ಟು ಕೊಡಲು ತಯಾರಾಗಿರಲಿಲ್ಲ. ಇದರ ಮುಂದುವರಿದ ಭಾಗವಾಗಿ ಇದೀಗ ಕಳೆದ ಆರು ತಿಂಗಳಿನಿಂದ ಹಡಗು ಅಧಿಕ್ರತರು ವಿಚಾರಣೆಯನ್ನು ಎದುರಿಸುತಿದ್ದರು. ಈ ನಿಟ್ಟಿನಲ್ಲಿ ಕಳೆದ ವಾರ ವಿಚಾರಣೆಯನ್ನು ಕೈಗೆತ್ತಿಕೊಂಡ ಇಂಡೋನೇಷ್ಯಾ ನ್ಯಾಯಾಲಯ ಪ್ರಸ್ತುತ ವೈದ್ಯಕೀಯ ಕಾಲಾವಧಿ ಮುಗಿದ 10 ಮಂದಿಯನ್ನು ಭಾರತಕ್ಕೆ ಕಳಿಸುವಂತೆ ನಿರ್ದೇಶಿಸಿತ್ತು. ಇವರ ಉದ್ಯೋಗ ಪರವಾನಿಗೆ ಕಾಲಾವಧಿ ಕೂಡಾ ಮುಗಿದಿತ್ತು, ಈ ಮಧ್ಯೆ ಅಸೌಖ್ಯದಿಂದ ಆಸ್ಪತ್ರೆ ದಾಖಲಾಗಿದ್ದ ಉತ್ತರ ಪ್ರದೇಶ ನಿವಾಸಿಯನ್ನು ಕಳೆದ ವಾರ ಭಾರತಕ್ಕೆ ಕಳುಹಿಸಲಾಗಿತ್ತು.
ಉದ್ಯೋಗ ಪರವಾನಿಗೆ ಹಾಗೂ ವೈದ್ಯಕೀಯ ಫಿಟ್ ನೆಸ್ ಕಾಲಾವಧಿ ಎರಡು ತಿಂಗಳು ಬಾಕಿ ಉಳಿದಿರುವ 12 ಮಂದಿ ಇನ್ನೂ ಅಲ್ಲಿ ಉಳಿದಿದ್ದಾರೆ. ಎರಡು ತಿಂಗಳೊಳಗೆ ಅವರನ್ನೂ ಕಳುಹಿಸುವುದಾಗಿ ಕಂಪೆನಿ ವಾಗ್ದಾನ ನೀಡಿರುವುದಾಗಿ ಊರಿಗೆ ತಲುಪಿದ ಮೂಸ ಕುಂಞÂ್ಞ ತಿಳಿಸಿದ್ದಾರೆ. ಕಾಸರಗೋಡು ಜಿಲ್ಲೆಯವರಾದ ಕುಂಬಳೆ ಕೊಪ್ಪಳ ನಿವಾಸಿ ಕಲಂದರ್, ಕಾಸರಗೋಡು ನಿವಾಸಿ ಅನುತೇಜ್ ಸಹಿತ 12 ಮಂದಿ ಇನ್ನೂ ಅಲ್ಲೇ ಉಳಿದಿದ್ದಾರೆ.


