ಮುಳ್ಳೇರಿಯ: ಇಲ್ಲಿನ ಗಣೇಶ ಕಲಾ ಮಂದಿರದಲ್ಲಿ 40 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ.2ರಿಂದ 4 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಸೆ.1 ರಂದು ಸಂಜೆ 5.30 ಕ್ಕೆ ಶ್ರೀ ಗಣೇಶ ವಿಗ್ರಹವನ್ನು ಮುಳ್ಳೇರಿಯ ಶ್ರೀ ಗಜಾನನ ಶಾಲಾ ಸಮೀಪದಿಂದ ಗಣೇಶ ಕಲಾ ಮಂದಿರಕ್ಕೆ ತರಲಾಗುವುದು. ರಾತ್ರಿ 8.30 ಕ್ಕೆ ಶ್ರೀ ಸತ್ಯನಾರಾಯಣ ಪೂಜೆ, ಮಂಗಳಾರತಿ ಜರಗಲಿದೆ.
ಸೆ.2 ರಂದು ಬೆಳಿಗ್ಗೆ 7 ಕ್ಕೆ ಗಣಪತಿ ಹವನ, ಪ್ರತಿಷ್ಠೆ, ಧ್ವಜಾರೋಹಣ, 9 ರಿಂದ ಭಜನೆ, 10 ರಿಂದ ಚಿತ್ರ ರಚನಾ ಸ್ಪರ್ಧೆ, 11 ರಿಂದ ಸತ್ಸಂಗ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, 2 ರಿಂದ ಭಜನೆ, ಸಂಜೆ 5 ರಿಂದ ಕಾರ್ಯಕ್ರಮ ವೈವಿಧ್ಯ, ರಾತ್ರಿ 7.30ಕ್ಕೆ ಮಹಾಪೂಜೆ, 8 ರಿಂದ ಯಕ್ಷಗಾನ ಪ್ರದರ್ಶನ ನಡೆಯುವುದು. ಸೆ.3 ರಂದು ಬೆಳಗ್ಗೆ 8 ರಿಂದ ಸಂಜೆ 5 ರ ವರೆಗೆ ಕುಣಿತ ಭಜನೆ ಸ್ಪರ್ಧೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 7736357977 ನಂಬ್ರದಲ್ಲಿ ಸಂಪರ್ಕಿಸಬಹುದು. ಸಂಜೆ 5 ರಿಂದ ನೃತ್ಯೋತ್ಸವ, ರಾತ್ರಿ 7.30 ಕ್ಕೆ ರಂಗ ಪೂಜೆ, ಮಹಾಪೂಜೆ, 8.15 ರಿಂದ ನೃತ್ಯಾರ್ಪಣಂ ನಡೆಯುವುದು.
ಸೆ.4 ರಂದು ಮಧ್ಯಾಹ್ನ 3 ರಿಂದ ಧಾರ್ಮಿಕ ಸಭೆ ಮತ್ತು ಬಹುಮಾನ ವಿತರಣೆ, ಧ್ವಜಾವರೋಹಣ, ಸಂಜೆ 4.30 ಕ್ಕೆ ಜಲಸ್ತಂಭನ ಶೋಭಾಯಾತ್ರೆ ನಡೆಯಲಿದೆ.


