ಮುಳ್ಳೇರಿಯ: ದೇಲಂಪಾಡಿ ಶ್ರೀ ರಾಮ ಭಜನಾ ಮಂದಿರದಲ್ಲಿ ಸೆ.2 ಮತ್ತು 3 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಸಾರ್ವಜನಿಕ ಶ್ರೀ ಗಣೇಶೋತ್ಸವ ನಡೆಯಲಿದೆ.
ಸೆ.2 ರಂದು ಪೂರ್ವಾಹ್ನ 7 ರಿಂದ ಬೆಳ್ಳಿಪ್ಪಾಡಿ ಶಕ್ತಿನಗರದ ಶ್ರೀ ಶಾರದಾಂಬ ಭಜನಾ ಮಂದಿರದಿಂದ ವಾದ್ಯಘೋಷ ಸಹಿತ ಶ್ರೀ ಗಣೇಶ ವಿಗ್ರಹವನ್ನು ತಂದು ಬೆಳಿಗ್ಗೆ 9 ಕ್ಕೆ ಪ್ರತಿಷ್ಠೆ, ಗಣಪತಿ ಹೋಮ, 10 ರಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ, ಅಪರಾಹ್ನ 2 ರಿಂದ ಸಭಾ ಕಾರ್ಯಕ್ರಮ ಜರಗಲಿದೆ. ರಾತ್ರಿ 7.30 ರಿಂದ ಮಹಾಪೂಜೆ, ಪ್ರಸಾದ ವಿತರಣೆ, 8 ರಿಂದ ಸಾಂಸ್ಕøತಿಕ ಕಾರ್ಯಕ್ರಮ ಜರಗಲಿದೆ.
ಸೆ.3 ರಂದು ಬೆಳಿಗ್ಗೆ 8 ಕ್ಕೆ ಗಣಪತಿ ಹೋಮ, 10.30 ರಿಂದ ಗಣೇಶನ ಚಿತ್ರ ರಚನೆ ಮತ್ತು ಭಕ್ತಿಗೀತೆ ಸ್ಪರ್ಧೆ, ಮಧ್ಯಾಹ್ನ 12 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ, 2 ರಿಂದ ಶೋಭಾಯಾತ್ರೆ ನಡೆಯುವುದು.


