ಕಾಸರಗೋಡು: ಕಾಸರಗೋಡು ಅಭಿವದ್ಧಿ ಪ್ಯಾಕೇಜ್‍ನ ವಿವಿಧ ಯೋಜನೆಗಳಿಗೆ ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿ ಅನುಮತಿ ನೀಡಿದೆ. ಸಮಿತಿಯ ಸಭೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜರಗಿತು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
ಕಿರುನೀರಾವರಿ ಇಲಾಖೆ ನಿರ್ವಹಿಸುತ್ತಿರುವ ಕಾಂಞಂಗಾಡ್ ನಗರಸಭೆಯ ಕಾರಾಟ್‍ವಯಲ್ ಲಿಫ್ಟ್ ಇರಿಗೇಶನ್ ಸ್ಕೀಂ ನವೀಕರಣ(86.50 ಲಕ್ಷ ರೂ.), ಲೋಕೋಪಯೋಗಿ ಇಲಾಖೆ ನಡೆಸುತ್ತಿರುವ ಕೊಟ್ರಚ್ಚಾಲ್ ರಸ್ತೆಯ ನವೀಕರಣ(1.10 ಕೋಟಿ ರೂ.), ಪುತ್ತಿಗೆ ಗ್ರಾಮ ಪಂಚಾಯತ್‍ನ ಪಳ್ಳ ಮಲಂಗರ ಪದ್ಯಾಣ ರಸ್ತೆ, ಮುಂಡ್ಯತ್ತಡ್ಕ-ಮುಗು-ಪುತ್ತಿಗೆ ರಸ್ತೆ ಬಿ.ಎಂ.ಆಂಡ್ ಬಿ.ಸಿ.(10.91 ಕೋಟಿ ರೂ.), ದೇಲಂಪಾಡಿ ಗ್ರಾಮ ಪಂಚಾಯತ್‍ನ ಅಡೂರು ಪಾಂಡಿ ರಸ್ತೆ ಬಿ.ಎಂ.ಆಂಡ್ ಬಿ.ಸಿ.(2.90 ಕೋಟಿ ರೂ.), ಪೆರಿಯ ಒಡಿಯಂಚಾಲ್ ರಸ್ತೆ ನವೀಕರಣ(4.30 ಕೊಟಿ ರೂ.), ಲೋಕೋಪಯೋಗಿ ಇಲಾಖೆ ಕಟ್ಟಡ ವಿಭಾಗ ನಿರ್ವಹಿಸುತ್ತಿರುವ ಬ್ಯಾಚುಲೆರ್ಸ್ ಹಾಸ್ಟೆಲ್(5 ಕೊಟಿ ರೂ.)ಡಯಟ್ ಮಾಯಿಪ್ಪಾಡಿ ಅಡ್ಮನಿಸ್ಟ್ರೇಟಿವ್ ಬ್ಲಾಕ್ ನಿರ್ಮಾಣ(3 ಕೋಟಿ ರೂ.) ಎಂಬ 8 ಯೋಜನೆಗಳಿಗೆ ತಾಂತ್ರಿಕ ಅನುಮತಿ ನೀಡಲಾಗಿದೆ.
ಜೊತೆಗೆ ಹಾರ್ಬರ್ ಎಂಜಿನಿಯರಿಂಗ್ ಇಲಾಖೆ ನಿರ್ವಹಣೆ ಮಾಡುತ್ತಿರುವ 16.70 ಕೋಟಿ ರೂ. ಭಂಡವಾಳದಲ್ಲಿ ನಿರ್ಮಾಣ ನಡೆಸುತ್ತಿರುವ ಮಂಜೇಶ್ವರ ಹಾರ್ಬರ್ ಬ್ರಿಜ್ ನಿರ್ಮಾಣ ಯೋಜನೆಯ ಪ್ರೀ ಕ್ವಾಲಿಫಿಕೇಶನ್ ಟೆಂಡರ್‍ಗೆ ಅಂಗೀಕಾರ ನೀಡಲಾಗಿದೆ.
ಸಮಿತಿ ಸಂಚಾಲಕ ಲೋಕೋಪಯೋಗಿ ಇಲಾಖೆಯ ಕಟ್ಟಡ ವಿಭಾಗ ಕಾರ್ಯಕಾರಿ ಎಂಜಿನಿಯರ್ ಸಿ.ರಾಜೇಶ್ ಚಂದ್ರನ್, ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅ„ಕಾರಿ ಇ.ಪಿ.ರಾಜ್ ಮೋಹನ್, ಹಣಕಾಸು ಅ„ಕಾರಿ ಕೆ.ಸತೀಶನ್, ತಾಂತ್ರಿಕ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

