ಬದಿಯಡ್ಕ: ಹಿರಿಯ ನಾಗರಿಕರ ವೇದಿಕೆಯ ಬದಿಯಡ್ಕ ಘಟಕದ ವತಿಯಿಂದ ಬದಿಯಡ್ಕ `ಹಗಲುಮನೆ'ಯಲ್ಲಿ ರಾಮಾಯಣ ಮಾಸಾಚರಣೆಯ ಅಂಗವಾಗಿ ಪುರಾಣ ವಾಚನ ಕಾರ್ಯಕ್ರಮ ಜರಗಿತು. ಶ್ರೀರಾಮ ಪಾದುಕಾ ಪಟ್ಟಾಭಿಷೇಕ ಕಥಾಭಾಗವನ್ನು ಡಾ. ಶಶಿರಾಜ ನೀಲಂಗಳ ಹಾಗೂ ಡಾ. ಬೇ.ಸೀ.ಗೋಪಾಲಕೃಷ್ಣ ಭಟ್ ಪ್ರಸ್ತುತಪಡಿಸಿದರು. ಬಳಿಕ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಕ್ಕಳಿಗೆ ಸ್ಮರಣಿಕೆಗಳನ್ನು ನೀಡಲಾಯಿತು. ಬೆಳ್ಳಿಗೆ ನಾರಾಯಣ ಮಣಿಯಾಣಿ, ವೇದಿಕೆಯ ಅಧ್ಯಕ್ಷ ಪಿಲಿಂಗಲ್ಲು ಕೃಷ್ಣ ಭಟ್, ಕಾರ್ಯದರ್ಶಿ ಸಂಪತ್ತಿಲ ಶಂಕರನಾರಾಯಣ ಭಟ್ ಮತ್ತು ಸದಸ್ಯರು ಪಾಲ್ಗೊಂಡಿದ್ದರು. ಮೈರ್ಕಳ ನಾರಾಯಣ ಭಟ್ ಸ್ವಾಗತಿಸಿ, ಈಶ್ವರ ಭಟ್ ಪೆರ್ಮುಖ ವಂದಿಸಿದರು.
ಹಿರಿಯ ನಾಗರಿಕರ ವೇದಿಕೆಯಿಂದ ರಾಮಾಯಣ ಮಾಸಾಚರಣೆ
0
ಆಗಸ್ಟ್ 11, 2019