ಮಂಜೇಶ್ವರ: ಮೀಯಪದವಿನ ವಿದ್ಯಾವರ್ಧಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಾಲ ಸಭೆ ಉದ್ಘಾಟನಾ ಕಾರ್ಯಕ್ರಮ ಶಾಲಾ ರಾಮಕೃಷ್ಣ ರಾವ್ ಸಭಾಂಗಣzಯಿತ್ತೀಚೆಗೆ ಜರಗಿತು.
ಮುಖ್ಯೋಪಾಧ್ಯಾಯ ಸುಧಾಕರ.ವಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕೃಷ್ಣ ಪ್ರಸಾದ್, ಮಾತೃಸಂಘದ ಅಧ್ಯಕ್ಷೆ ಕೈರುನ್ನಿಸಾ, ಶಾಲಾ ಹಿರಿಯ ಶಿಕ್ಷಕಿ ನಳಿನಿ ಟೀಚರ್, ರತ್ನಾವತಿ ಟೀಚರ್, ಶಾಲಾಭಿವೃದ್ದಿ ಸಮಿತಿ ಸಂಚಾಲಕಿ ಅಫ್ಸತ್ ಸಿ.ಟಿ ಹಾಗೂ ರಘುವೀರ್ ರಾವ್ ಉಪಸ್ಥಿತರಿದ್ದು, ಶುಭ ಹಾರೈಸಿದರು. ರಿಫಾ ಸ್ವಾಗತಿಸಿ, ವರ್ಷಾ ವಂದಿಸಿದರು. ವಿದÁ್ಯರ್ಥಿನಿ ತನ್ವಿ ಕಾರ್ಯಕ್ರಮ ನಿರೂಪಿಸಿದಳು.ಬಳಿಕ ಸಾಂಸ್ಕøತಿಕ ಕಾರ್ಯಕ್ರಮಗಳು ವೇದಿಕೆಯಲ್ಲಿ ಜರಗಿದವು. ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ನಿರೂಪಿಸಿದರು.


