ಮಂಜೇಶ್ವರ: ವಿಹಿಂಪ ವರ್ಕಾಡಿ ಖಂಡ ಸಮಿತಿ, ಭಜರಂಗದಳ, ಮಾತೃಸಮಿತಿ ವರ್ಕಾಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಜಾಗೃತ ಹಿಂದೂ ಸಮಾವೇಶ ಭಾನುವಾರ ವರ್ಕಾಡಿ ವಿಶ್ವಪ್ರಭಾ ಸಭಾಂಗಣದಲ್ಲಿ ಸಂಪನ್ನಗೊಂಡಿತು.
ಕಣಂತೂರು ವೈದ್ಯನಾಥ ದೈವಸ್ಥಾನದ ಅಧ್ಯಕ್ಷ ದೇವೀ ಪ್ರಸಾದ್ ಪೊಯ್ಯತ್ತಬೈಲ್ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ಭಜರಂಗದಳ ಪ್ರಾಂತ್ಯ ಸಂಚಾಲಕ ಮುರಳೀಕೃಷ್ಣ ಹಸಂತ್ತಡ್ಕ ಅವರು, ಸವಾಲುಗಳನ್ನು ನಿರಂತರವಾಗಿ ಎದುರಿಸುತ್ತಿರುವ ಹಿಂದೂ ಸಮೂಹ ಧರ್ಮ ಸಂರಕ್ಷಣೆಯ ನಿಟ್ಟಿನಲ್ಲಿ ಜಾಗೃತರಾಗಿರಬೇಕು. ಯುವ ಸಮೂಹಕ್ಕೆ ಅಗತ್ಯ ಮಾರ್ಗದರ್ಶನ ನೀಡಬೇಕು ಎಂದು ಕರೆನೀಡಿದರು.
ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‍ವೆಲ್, ಭಜರಂಗದಳ ತಾಲೂಕು ಸಂಯೋಜಕ ಶೈಲೇಶ್ ಅಂಜರೆ,ಡಾ.ಜಯಪ್ರಕಾಶನಾರಾಯಣ ತೊಟ್ಟೆತ್ತೋಡಿ, ವಿಹಿಂಪ ಕಾಸರಗೋಡು ಗ್ರಾಮಾಂತರ ಜಿಲ್ಲಾಧ್ಯಕ್ಷ ಅಂಗಾರ ಶ್ರೀಪಾದ, ವಿಹಿಂಪ ಜಿಲ್ಲಾ ಕಾರ್ಯಾಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು, ಮಾತೃಮಂಡಳಿ ಗ್ರಾಮಾಂತರ ಜಿಲ್ಲಾಧ್ಯಕ್ಷೆ ಮೀರಾ ಆಳ್ವ, ವಹಿಂಪ ಸಂಘಟನಾ ಕಾರ್ಯದರ್ಶಿ ಸಂಕಪ್ಪ ಭಂಡಾರಿ, ವಿಹಿಂಪ ತಾಲೂಕು ಅಧ್ಯಕ್ಷ ಸುರೇಶ್ ಶೆಟ್ಟಿ ಪರಂಕಿಲ, ಭಜರಂಗದಳ ವರ್ಕಾಡಿ ಖಂಡ ಸಮಿತಿ ಸಂಚಾಲಕ ರಾಘವೇಂದ್ರ ಮಯ್ಯ, ಶಂಕರ ಭಟ್ ಉಳುವಾನ,ಬಾವೀ ಸುರೇಶ್, ಯತೀಶ್ ಶೆಟ್ಟಿ, ಗೋವಿಂದ ರಾಮ ಭಟ್, ನಿರ್ಮಲ, ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.ವಿಹಿಂಪ ವರ್ಕಾಡಿ ಖಂಡ ಸಮಿತಿ ಅಧ್ಯಕ್ಷ ಸೇಸಪ್ಪ ಅರಿಂಗುಳ ಅಧ್ಯಕ್ಷತೆ ವಹಿಸಿದ್ದರು.ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ಕಾರ್ಯಕ್ರಮದ ಮೊದಲು ಕಾರ್ಯಕರ್ತರಿಂದ ವರ್ಕಾಡಿ ಪೇಟೆಯಲ್ಲಿ ಬೃಹತ್ ಜಾಗೃತ ಮೆರವಣಿಗೆ ನಡೆಯಿತು.


