ಬದಿಯಡ್ಕ: ಶಾಲಾ ಜೀವನದಲ್ಲಿ ಪಠ್ಯ ಕಲಿಕೆ ಜೊತೆ ಸಾವಯವ ಕೃಷಿ ವಿಧಾನ ಅರಿತು ಪರಿಸರದಲ್ಲಿ ಬೆಳೆಸಲು ತೊಡಗಿಸಿಕೊಳ್ಳಬೇಕು ಎಂದು ಬದಿಯಡ್ಕ ಕೃಷಿ ಭವನದ ಅಧಿಕಾರಿ ಮೀರಾ ಅಭಿಪ್ರಾಯಪಟ್ಟರು.
ಪೆರಡಾಲ ಸರ್ಕಾರಿ ಪ್ರೌಢಶಾಲಾ ಏಳನೇ ತರಗತಿ ವಿದ್ಯಾರ್ಥಿಗಳೊಂದಿಗಿನ `ತರಕಾರಿ ಬೆಳೆ' ಕುರಿತ ಇತ್ತೀಚೆಗೆ ನಡೆಸಿದ ಸಂವಾದದಲ್ಲಿ ಅವರು ಮಾತನಾಡಿದರು.
ಮಣ್ಣಿನಲ್ಲಿ ಸಾವಯವ ಅಂಶಗಳು ಮಿಳಿತಗೊಂಡಾಗ ಫಲವತ್ತತೆ ಹೆಚ್ಚುತ್ತದೆ. ಮಣ್ಣಿನ ಪಿ.ಎಚ್. ಮೌಲ್ಯ ಪರೀಕ್ಷಿಸಿ ಆಮ್ಲೀಯ ಅಂಶವಿದ್ದರೆ ತಟಸ್ಥಗೊಳಿಸಲು ಸುಣ್ಣ ಸೇರಿಸುವುದು ಉತ್ತಮ. ರಾಸಾಯನಿಕ ಗೊಬ್ಬರ ಮಿತಿಮೀರಿ ಬಳಸಿದರೆ ಸತ್ವ ನಾಶ. ಜೈವಿಕ ಹಾಗೂ ಕಂಪೆÇೀಸ್ಟ್ ಗೊಬ್ಬರ ತಯಾರಿಸಿ ಬಳಸುವುದು ಒಳ್ಳೆಯದು. ಭೂಮಿಯ ಅಂತರ್ಜಲ ಜಾಗರೂಕತೆಯಿಂದ ಉಪಯೋಗಿಸಬೇಕು. ಮಳೆಗಾಲದಲ್ಲಿ ಜಲ ಮರುಪೂರಣ ನಡೆಸಬೇಕು ಎಂಬ ಚಿಂತನೆಗಳು ವ್ಯಕ್ತವಾದುವು. ಓಣಂ ಹಬ್ಬಕ್ಕೆ ವಿಷಮುಕ್ತ ತರಕಾರಿ ಯೋಜನೆಯಂತೆ ಮಕ್ಕಳಿಗೆ ತರಕಾರಿ ಬೀಜ ವಿತರಿಸಲಾಯಿತು. ಶಿಕ್ಷಕಿಯರಾದ ಜಯಲತಾ, ಪಲ್ಲವಿ, ಶ್ರೀಧರ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಶ್ರೀಶಾಂತ್ ವಂದಿಸಿದರು.


