ಕುಂಬಳೆ: ಪೆರ್ಮುದೆ ಲಾರೆನ್ಸ್ ನಗರದ ಸೈಂಟ್ ಲಾರೆನ್ಸ್ ದಿ ಮಾರ್ಟಿರ್ ಇಗರ್ಜಿಯಲ್ಲಿ ಸಂತ ಲಾರೆನ್ಸ್ ರ ವಾರ್ಷಿಕ ಮಹೋತ್ಸವ ಭಾನುವಾರ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು.
ವಾರ್ಷಿಕ ಮಹೋತ್ಸವದ ಅಂಗವಾಗಿ ದಿವ್ಯ ಬಲಿಪೂಜೆ ನಡೆಯಿತು. ಕಾಸರಗೋಡು ಧರ್ಮವಲಯದ ಪ್ರಧಾನ ಧರ್ಮಗುರುಗಳೂ, ಬೇಳ ಶೋಕಮಾತಾ ದೇವಾಲಯದ ಧರ್ಮಗುರುಗಳೂ ಆದ ಫಾ. ಜೋನ್ ವಾಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪೆರ್ಮುದೆ ಇಗರ್ಜಿಯ ಧರ್ಮಗುರು ಫಾ. ಮೆಲ್ವಿನ್ ಫೆರ್ನಾಂಡಿಸ್, ಫಾ. ಸುನಿಲ್ ಲೋಬೊ ಕೊಲ್ಲಂಗಾನ, ಪಾ. ಸುನಿಲ್ ಡಿಸೋಜ ಉಕ್ಕಿನಡ್ಕ ಉಪಸ್ಥಿತರಿದ್ದರು. ದಿವ್ಯಬಲಿಪೂಜೆಯ ಮುನ್ನ ಆಶೀರ್ವದಿತ ಮೋಂಬತ್ತಿಗಳನ್ನು ವಿತರಿಸಲಾಯಿತು. ಇಗರ್ಜಿಗೆ ದಾನವಾಗಿ ಲಭಿಸಿದ ಜನರೇಟರ್‍ನ್ನು ಉದ್ಘಾಟಿಸಲಾಯಿತು. ಕಾಸರಗೋಡು ಧರ್ಮವಲಯದ ಪ್ರಧಾನ ಧರ್ಮಗುರು ಫಾ. ಜೋನ್ ವಾಸ್ ಆಶೀರ್ವಚನ ನಡೆಸಿ ಚಾಲನೆ ನೀಡಿದರು. ಪೆರ್ಮುದೆ ನೂತನ ಇಗರ್ಜಿಯ ಉದ್ಘಾಟನೆಯ ಪ್ರಯುಕ್ತ ಪ್ರಕಟಿಸಿದ `ಪೆರ್ಮುದೆಚೊ ಪರ್ಜಳ್' ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಕಾಸರಗೋಡು ಧರ್ಮವಲಯದ ಪ್ರಧಾನ ಧರ್ಮಗುರು ಫಾ. ಜೋನ್ ವಾಸ್ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಫಾ. ಮೆಲ್ವಿನ್ ಫೆರ್ನಾಂಡಿಸ್, ಫಾ. ಸುನಿಲ್ ಲೋಬೊ ಕೊಲ್ಲಂಗಾನ, ಪಾ. ಸುನಿಲ್ ಡಿಸೋಜ ಉಕ್ಕಿನಡ್ಕ, ಸಂಪಾದಕಿ ಲವೀನ ಪ್ರೀತಿ ಕ್ರಾಸ್ತ, ಇಗರ್ಜಿಯ ಪಾಲನಾ ಸಮಿತಿ ಉಪಾಧ್ಯಕ್ಷ ಸಿಪ್ರಿಯನ್ ಡೆನಿಸ್ ಡಿಸೋಜ ಪುರುಷಮಜಲು, ಕಾರ್ಯದರ್ಶಿ ಜೋನ್ ಡಿಸೋಜ ಓಡಂಗಲ್ಲು ಉಪಸ್ಥಿತರಿದ್ದರು. ಫೆವಿನಾ ಎಶ್ವಿ ಕ್ರಾಸ್ತ ಕಾರ್ಯಕ್ರಮ ನಿರೂಪಿಸಿದರು.


