ಕುಂಬಳೆ: ಸಹಕಾರ ಭಾರತಿ ಮಂಜೇಶ್ವರ ತಾಲೂಕು ಸಮ್ಮೇಳನವು ಇತ್ತೀಚೆಗೆ ಕುಂಬಳೆ ಅನಂತ ಪೈ ಸಭಾಂಗಣದಲ್ಲಿ ನಡೆಯಿತು. ಸ್ವಾಗತ ಸಮಿತಿ ಅಧ್ಯಕ್ಷರಾದ ನಾರಾಯಣ ತುಂಗಾ ಇವರ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನವನ್ನು ಸಹಕಾರ ಭಾರತಿ ರಾಜ್ಯ ಸಮಿತಿ ಸದಸ್ಯ ಐತಪ್ಪ ಮವ್ವಾರ್ ಉದ್ಘಾಟಿಸಿದರು.
ಸಹಕಾರ ಭಾರತಿ ಅಖಿಲ ಭಾರತ ಕಾರ್ಯದರ್ಶಿ ನ್ಯಾಯವಾದಿ ಕರುಣಾಕರನ್ ನಂಬ್ಯಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ದೇಶದ ಕೃಷಿಕರು ಹಾಗೂ ರೈತರಿಗೆ ಬೆನ್ನೆಲುಬಾಗಿರುವ ಸಹಕಾರಿ ರಂಗವನ್ನು ಕೇರಳ ಬ್ಯಾಂಕಿನ ಹೆಸರಿನಲ್ಲಿ ಬುಡಮೇಲುಗೊಳಿಸಿ ರಾಜಕೀಯ ಹಸ್ತಕ್ಷೇಪವನ್ನು ನಡೆಸುತ್ತಿರುವ ಎಡರಂಗದ ಧೋರಣೆಯನ್ನು ಅವರು ಟೀಕಿಸಿದರು. ಸಹಕಾರಿ ಸಂಸ್ಥೆಯ ಆಡಳಿತ ಮಂಡಳಿ ಮತ್ತು ನೌಕರ ವೃಂದ ಜವಾಬ್ದಾರಿಗಳು ಹಾಗೂ ಕಾರ್ಯಕ್ಷೇತ್ರಗಳ ಬಗ್ಗೆ ಐತಪ್ಪ ಮವ್ವಾರ್ ಅವರು ತರಗತಿ ನೀಡಿದರು.
ಇತ್ತೀಚೆಗೆ ನಿಧನರಾದ ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಇವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು. ಜಮ್ಮು-ಕಾಶ್ಮೀರದ 370ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರ ಸರಕಾರದ ಕ್ರಮವನ್ನು ಸಮ್ಮೇಳನವು ಅನುಮೋದಿಸಿತು. ಸಮ್ಮೇಳನದಲ್ಲಿ ಜಿಲ್ಲಾಧ್ಯಕ್ಷ ಗಣಪತಿ ಕೋಟೆಕಣಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಂಕರನಾರಾಯಣ ಭಟ್ ಕಿದೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣೇಶ್ ಪಾರಕಟ್ಟೆ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ಈ ಸಂದರ್ಭ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಸಹಕಾರ ಭಾರತಿ ಮಂಜೇಶ್ವರ ತಾಲೂಕ ಅಧ್ಯಕ್ಷರಾಗಿ ಅಶೋಕ್ ಬಾಡೂರು, ಉಪಾಧ್ಯಕ್ಷರಾಗಿ ಪ್ರೇಮ್ ಕುಮಾರ್ ಮಂಗಲ್ಪಾಡಿ, ಪ್ರಧಾನ ಕಾರ್ಯದರ್ಶಿಗಳಾಗಿ ನಾರಾಯಣ ತುಂಗಾ ವರ್ಕಾಡಿ, ಕಾರ್ಯದರ್ಶಿಯಾಗಿ ರಾಜೇಶ್ ಕುಮಾರ್ ಬಂಬ್ರಾಣ ಹಾಗೂ ತುಕಾರಾಮ ಕುಂಬಳೆ ಖಜಾಂಜಿಯಾಗಿ, ಸದಸ್ಯರುಗಳಾಗಿ ವೆಂಕಟ್ರಮಣ ಭಟ್ ಪೆರ್ಲ, ಪ್ರೇಮಲತಾ ಆಳ್ವ ಬಂಬ್ರಾಣ, ಜಯಪ್ರಕಾಶ್ ಎಡನೀರು, ವೇಣುಗೋಪಾಲ ಶೆಟ್ಟಿ ಮುಗು, ವಿಶ್ವೇಶ್ವರ ಭಟ್ ಬಾಯಾರು, ವಿಶ್ವನಾಥ ಶೆಟ್ಟಿ ಎಡನಾಡು, ಬಾಲಕೃಷ್ಣ ಶೆಟ್ಟಿ ಮಂಗಲ್ಪಾಡಿ, ದೀಪಿಕಾ ಕುಂಬಳೆ, ಜಯಶ್ರೀ ಮಂಗಲ್ಪಾಡಿ ಇವರನ್ನು ಆರಿಸಲಾಯಿತು. ಸಮ್ಮೇಳನದಲ್ಲಿ ವಿವಿಧ ಸಹಕಾರಿ ಸಂಸ್ಥೆಗಳ ಅಧ್ಯಕ್ಷರುಗಳು ನಿರ್ದೇಶಕರುಗಳು ನೌಕರ ವೃಂದದವರು ಹಾಗೂ ಇತರ ಸಹಕಾರಿಗಳು ಭಾಗವಹಿಸಿದರು. ಸಹಕಾರ ಭಾರತಿ ಮಂಜೇಶ್ವರ ತಾಲೂಕು ಪ್ರಧಾನ ಕಾರ್ಯದರ್ಶಿ ದಿಲೀಪ್ ಪೆರ್ಲ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.

