ಉಪ್ಪಳ:ಬಾಯಾರು ಸಮೀಪದ ಚೇರಾಲು ಶ್ರೀ ಶಾರದಾ ಮಾತೃ ಮಂಡಳಿ ಶಿವಾಜಿನಗರ ವತಿಯಿಂದ ನಾಲ್ಕನೇ ವರ್ಷದ ವರಮಹಾಲಕ್ಷ್ಮೀ ಪೂಜೆ ಶಾರದಾ ಭಜನಾ ಮಂದಿರ ಚೇರಾಲಿನಲ್ಲಿ ಜರುಗಿತು. ವರಮಹಾಲಕ್ಷ್ಮೀ ವ್ರತಾಚರಣೆಯಲ್ಲಿ ಹಲವು ಮಂದಿ ಮಾತಾಭಗಿನಿಯರು ಪಾಲ್ಗೊಂಡರು.
ಈ ಸಂದರ್ಭ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಧಾರ್ಮಿಕ ರಾಜಕೀಯ ಮುಖಂಡ ರವೀಶ ತಂತ್ರಿ ಕುಂಟಾರು ಅವರು, ಪವಿತ್ರ ಆಚರಣೆಗಳನ್ನು ಉಳಿಸಿ ಬೆಳೆಸುವ ಮೂಲಕ ಧರ್ಮ ಸಂಸ್ಕøತಿಯನ್ನು ಪ್ರಜ್ವಲಿಸಬೇಕಿದೆ ಎಂದರು. ವಿಶ್ವದಲ್ಲಿ ಹಲವು ಮತ ಪರಂಪರೆಗಳಿರಬಹುದು. ಆದರೆ ವಿಶ್ವವನ್ನೇ ಬೆಳಗುವ ಧರ್ಮ ಪರಂಪರೆಯೊಂದಿದ್ದರೆ ಅದು ಭಾರತ ಭುವಿಯ ಸನಾತನ ಸಂಸ್ಕøತಿಯನ್ನು ಉದ್ದೀಪನಗೊಳಿಸಿದ ಹಿಂದೂ ಧರ್ಮ ಪರಂಪರೆ ಎಂದು ತಿಳಿಸಿದರು. ಮಾನವ ಜನ್ಮ ಪುಣ್ಯದ ಜನ್ಮವಾಗಿದ್ದು, ಉತ್ತಮ ಮಾನವೀಯ ಗುಣಗಳೊಂದಿಗೆ ಮನುಷ್ಯ ಜೀವನವನ್ನು ಎಲ್ಲರೂ ಪಾವನಗೊಳಿಸಬೇಕಿದೆ ಎಂದರು. ವಿಶ್ವದ ಹಲವು ಭಾಷೆಗಳ ಮೂಲ ಸಂಸ್ಕøತ ಮತ್ತು ಭಾರತದ ಧರ್ಮ-ಸಂಸ್ಕøತಿಗಳು ಎಲ್ಲ ಸಂಸ್ಕøತಿ ನಾಗರಿಕತೆಗಳ ಮೂಲ. ಸಂಸ್ಕøತ ಮತ್ತು ಸಂಸ್ಕøತಿಗಳಿಗೆ ಅಧಿಪತ್ಯ ನೀಡಿದ ದೇಶ ನಾವು ಹುಟ್ಟಿದ ಭರತ ಭುವಿ, ಈ ನಿಟ್ಟಿನಲ್ಲಿ ನಾವೆಲ್ಲರೂ ಧನ್ಯರು. ಭಾರತ ದೇಶವು ವಿಶ್ವದ ಗುರುಸ್ಥಾನದಲ್ಲಿದೆ. ಮಾತ್ರವಲ್ಲದೇ ಈ ನೆಲದ ಪ್ರತಿಯೊಂದು ಕಣಕಣದಲ್ಲೂ ದೈವಿಕತ್ವವಿದೆ ಎಂದರು. ಜಮ್ಮು ಕಾಶ್ಮೀರದ ಬಗ್ಗೆ ಉಲ್ಲೇಖಿಸಿದ ಅವರು 370 ನೇ ವಿಧಿ ರದ್ದತಿಯಿಂದ ಶ್ಯಾಮ ಪ್ರಸಾದ್ ಮುಖರ್ಜಿಯವರ ತ್ಯಾಗ ಬಲಿದಾನಕ್ಕೆ ಫಲಪ್ರಾಪ್ತಿಯಾಗಿದೆ ಎಂದರು.
ವಸಂತಿ ಚೇರಾಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಗೀತಾ ಟೀಚರ್ ಚೇರಾಲು ಸ್ವಾಗತಿಸಿದರು, ವಿಮಲ ಚೇರಾಲು ಕಾರ್ಯಕ್ರಮ ನಿರೂಪಿಸಿದರು.ಸುಧಾ ವಸಂತ ಚೇರಾಲು ವಂದಿಸಿದರು. ತಂತ್ರಿ ಸತ್ಯನಾರಾಯಣ ಭಟ್, ಅಶ್ವಿನ್ ಭಟ್ ಆಟಿಕುಕ್ಕೆ, ಹರೀಶ್ ಭಟ್ ಪೂಜಾ ಕೈಂಕರ್ಯವನ್ನು ನೆರವೇರಿಸಿದರು.



