ಸಮರಸ ಚಿತ್ರ ಸುದ್ದಿ: ಕುಂಬಳೆ: ಕೋಟೆಕ್ಕಾರ್ ಮುಳಿಯಡ್ಕ ರಸ್ತೆಯ ಆಚೆಗೋಳಿ ಸಮೀಪ ಬೃಹತ್ ಮರವೊಂದು ಶನಿವಾರ ವಿದ್ಯುತ್ ತಂತಿಗಳಿಗೆ ಬಿದ್ದಿದ್ದು ಅನೇಕ ವಿದ್ಯುತ್ ಕಂಬಗಳಿಗೆ ವ್ಯಾಪಕ ಹಾನಿ ಉಂಟಾಯಿತು. ಮತ್ತು ಕೆಲಕಾಲ ವಾಹನ ಸಂಪರ್ಕ ಮೊಟಕುಗೊಂಡಿತು. ರಸ್ತೆಗುರುಳಿದ ಮರವನ್ನು ನಾಗರಿಕರು ತೆರವುಗೊಳಿಸಿದ ಬಳಿಕ ರಸ್ತೆ ಸಂಪರ್ಕ ಯಥಾಸ್ಥಿತಿಗೆ ಮರಳಿತು.