ಕುಂಬಳೆ: ಧರ್ಮತ್ತಡ್ಕ ಶ್ರೀ ದುರ್ಗಾ ಪರಮೇಶ್ವರೀ ಹೈಯರ್ ಸೆಕೆಂಡರಿ ಶಾಲೆಯಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು. ಶಾಲಾ ಮುಖ್ಯೋಪಾಧ್ಯಾಯ ರಾಮಚಂದ್ರ ಭಟ್ ನೇರೋಳು ಧ್ವಜಾರೋಹಣಗೈದರು. ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಪ್ಪಳ ಅಗ್ನಿಶಾಮಕದಳದ ಸಹ ಅಧಿಕಾರಿ ಎ. ಟಿ. ಜೋರ್ಜ್ ಸ್ವಾತಂತ್ರ್ಯದ ಮಹತ್ವ ಹಾಗೂ ಅಗ್ನಿ ಶಾಮಕದಳದ ರಕ್ಷಣಾ ಕಾರ್ಯದ ಬಗ್ಗೆ ತಿಳಿಸಿದರು. ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಉಳುವಾನ ರಾಮಚಂದ್ರ ಭಟ್ ಮಾತನಾಡಿ, ಸ್ವಾತಂತ್ರ್ಯ ಬಲಿದಾನಿಗಳಾದ ದೇಶಪ್ರೇಮಿಗಳನ್ನು ಸ್ಮರಿಸಿದರು. ಶಾಲಾ ಮುಖ್ಯೋಪಾಧ್ಯಾಯ ರಾಮಚಂದ್ರ ಭಟ್ ನೇರೋಳು ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ ಸ್ವಾತಂತ್ರ್ಯ ದಿನವನ್ನು ಉದ್ದೇಶಿಸಿ ಮಾತನಾಡಿದರು. ಶಾಲಾ ವ್ಯವಸ್ಥಾಪಕ ಶಂಕರನಾರಾಯಣ ಭಟ್, ಹೈಯರ್ ಸೆಕೆಂಡರಿ ಶಾಲೆಯ ಅಧ್ಯಾಪಕ ಸತೀಶ್ ಕುಮಾರ್ ಶೆಟ್ಟಿ ಒಡ್ಡಂಬೆಟ್ಟು ಶುಭಾಶಂಸನೆಗೈದರು. ಅಧ್ಯಾಪಕ ಗೋವಿಂದ ಭಟ್ ಕಾರ್ಯಕ್ರಮ ನಿರೂಪಿಸಿದರು. ಶಿವಪ್ರಸಾದ್ ಚೆರುಗೋಳಿ ವಂದಿಸಿದರು. ಶಿಕ್ಷಕರಾದ ಪ್ರಶಾಂತ್ ಹೊಳ್ಳ, ರಾಜಕುಮಾರ್, ಸಂತೋಷ್ ಕುಮಾರ್, ಶಿವಕುಮಾರ್, ನಾಗರಾಜ್, ಉಣ್ಣಿಕೃಷ್ಣ, ಪ್ರದೀಪ್ ಕುಮಾರ್, ದಿನೇಶ್, ಲತಾ ನೇತೃತ್ವ ನೀಡಿದರು.
ಧರ್ಮತ್ತಡ್ಕದಲ್ಲಿ ಸ್ವಾತಂತ್ರ್ಯ ದಿನಾಚರಣಾ ಕಾರ್ಯಕ್ರಮ
0
ಆಗಸ್ಟ್ 16, 2019