ಮುಳ್ಳೇರಿಯ: ಬೇಕಲ ಸರಕಾರಿ ಫಿಶರೀಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. 1990-95ನೇ ಎಸ್‍ಎಸ್‍ಎಲ್‍ಸಿ ತಂಡ ನಿರ್ಮಿಸಿದ ಧ್ವಜಸ್ತಂಭವನ್ನು ರಾಜ್ಯ ಶಿಕ್ಷಣ ಇಲಾಖೆಯ ನಿವೃತ್ತ ಉಪಮಹಾ ನಿರ್ದೇಶಕ ಮಹಾಲಿಂಗೇಶ್ವರ ರಾಜ್ ಉದ್ಘಾಟಿಸಿ ಶಾಲೆಗೆ ಸಮರ್ಪಿಸಿದರು. ತೃಕ್ಕನ್ನಾಡು ಕ್ಷೇತ್ರ ಉತ್ಸವ ಸಮಿತಿ ವತಿಯಿಂದ ಈ ವರ್ಷದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಎಲ್ಲ ವಿಷಯಗಳಲ್ಲಿ ಎ ಪ್ಲಸ್ ಗ್ರೇಡ್ ಪಡೆದ ವಿದ್ಯಾರ್ಥಿಗಳಿಗೆ ಸ್ಕಾಲರ್‍ಶಿಪ್ ವಿತರಿಸಲಾಯಿತು. ಶಾಲೆಯ ಆಡಳಿತ ಸಮಿತಿ ಪ್ರಧಾನ ಸಂಚಾಲಕ, ಮಾಜಿ ಅಧ್ಯಾಪಕ ವಿ. ರಾಮನ್ ಮಾಸ್ತರ್ ಅವರ ಸ್ಮರಣಾರ್ಥ ಪುತ್ರ ಸುರೇಂದ್ರನಾಥ್ ಏರ್ಪಡಿಸಿದ ಸ್ಕಾಲರ್‍ಶಿಪ್‍ನ್ನು ವಿತರಿಸಲಾಯಿತು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಕೆ. ವಿ. ಶ್ರೀಧರನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ಕೆ. ಜಯಪ್ರಕಾಶ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತೃಕ್ಕನ್ನಾಡು ಕ್ಷೇತ್ರ ಉತ್ಸವ ಸಮಿತಿ ಅಧ್ಯಕ್ಷ ಸುಧಾಕರನ್ ಕದಿರ್, ತೃಕ್ಕನ್ನಾಡು ಕ್ಷೇತ್ರ ಟ್ರಸ್ಟಿ ಮಂಡಳಿ ಸದಸ್ಯ ಶಿವರಾಮನ್, ವಿಜಯರಾಮ್, ಉತ್ಸವ ಸಮಿತಿ ಕಾರ್ಯದರ್ಶಿ ಗೋಪಿ, ವಿ. ಆರ್. ವಿದ್ಯಾಸಾಗರ್ ಮಾತನಾಡಿದರು. ಪ್ರಾಂಶುಪಾಲ ಅಬ್ದುಲ್ ಲತೀಫ್ ಸ್ವಾಗತಿಸಿ, ಹಿರಿಯ ಸಹಾಯಕಿ ಅನಿತ ಎಂ. ವಂದಿಸಿದರು.
ಬೇಕಲ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ
0
ಆಗಸ್ಟ್ 16, 2019