ಬದಿಯಡ್ಕ : ಉದಯಗರಿ, ಬಾಂಜತ್ತಡ್ಕ ವೃಂದಾವನ ಧಾರ್ಮಿಕ ಸಾಂಸ್ಕøತಿಕ ಸಮಿತಿಯ ವತಿಯಿಂದ ಆ.23ರಂದು ಉದಯಗಿರಿ ಶ್ರೀ ಸತ್ಯನಾರಾಯಣ ಭಜನಾ ಮಂದಿರದ ಪರಿಸರದಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮವು ಜರಗಲಿರುವುದು. ಅಧ್ಯಾಪಕ ರಾಜೇಶ್ ಉಬ್ರಂಗಳ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ವಿವಿಧ ಸ್ಪರ್ಧೆಗಳು ನಡೆಯಲಿರುವುದು. ಸಂಜೆ 4.30 ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಶ್ರೀ ಸತ್ಯನಾರಾಯಣ ಭಜನಾ ಮಂದಿರದ ಅಧ್ಯಕ್ಷರಾದ ಪುರುಷೋತ್ತಮ ಭಟ್ ಮಿಂಚಿನಡ್ಕ ಅಧ್ಯಕ್ಷತೆ ವಹಿಸಲಿರುವರು. ಸಾಮಾಜಿಕ ಮುಂದಾಳು ಹರೀಶ್ ನಾರಂಪಾಡಿ ಸಮಾರೋಪ ಸಭೆಯನ್ನು ಉದ್ಘಾಟಿಸಲಿರುವರು. ಉದಯಗಿರಿ ಶಾಲೆಯ ಅಧ್ಯಾಪಕ ಟಿ.ಶ್ರೀಧರ ಪ್ರಸಾದ ಬಹುಮಾನ ವಿತರಿಸಲಿರುವರು. ಸಂಜೆ 6.30ಕ್ಕೆ ಭಜನೆ, ಮಂಗಳಾರತಿ, ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಗಲಿದೆ.
ಉದಯಗಿರಿ ಬಾಂಜತ್ತಡ್ಕದಲ್ಲಿ ಆ.23ರಂದು ಶ್ರೀಕೃಷ್ಣ ಜನ್ಮಾಷ್ಟಮಿ
0
ಆಗಸ್ಟ್ 16, 2019