ಕಾಸರಗೋಡು: ಕಾಸರಗೋಡು ಜಿಲ್ಲಾ ವಾರ್ತಾ ಇಲಾಖೆ ಮತ್ತು ಕಾಸರಗೋಡು ರೋಟರಿ ಕ್ಲಬ್ ಜಂಟಿ ವತಿಯಿಂದ ಸೋಮವಾರ ಜಿಲ್ಲಾ ಮಟ್ಟದ ದೇಶಭಕ್ತಿಗೀತೆ, ರಾಷ್ಟ್ರಗೀತೆ ಆಲಾಪನೆ ಸ್ಪರ್ಧೆ ಜರುಗಿತು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಸ್ಪರ್ಧೆಯಲ್ಲಿ ಕಾಸರಗೋಡು ಬಿ.ಇ.ಎಂ.ಪ್ರೌಢಶಾಲೆಯ ತಂಡ ಪ್ರಥಮಬಹುಮಾನ ಗಳಿಸಿದೆ. ಕೇಂದ್ರೀಯ ವಿದ್ಯಾಲಯ ನಂ.1 ದ್ವಿತೀಯ ಬಹುಮಾನ, ಕಾಸರಗೋಡು ಸರಕಾರಿ ಹೈಯರ್ ಸೆಕೆಂಡರಿ ಶಾಲೆ ತೃತೀಯ ಬಹುಮಾನ ಪಡೆದಿವೆ. ಒಟ್ಟು ಹತ್ತು ತಂಡಗಳು ಭಾಗವಹಿಸಿದ್ದುವು.
ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್ ಸ್ಪರ್ಧೆಯನ್ನು ಉದ್ಘಾಟಿಸಿದರು. ಜಿಲ್ಲಾವಾರ್ತಧಿಕಾರಿ ಮಧುಸೂದನನ್ ಎಂ. ಬಹುಮಾನವಿತರಿಸಿದರು. ಕಾಸರಗೋಡು ರೋಟರಿ ಕ್ಲಬ್ ಸಹಾಯಕ ಗವರ್ನರ್ ಲಜೀಷ್ ಅಧ್ಯಕ್ಷತೆ ವಹಿಸಿದ್ದರು.


