HEALTH TIPS

ಡೊನಾಲ್ಡ್ ಟ್ರಂಪ್ ಜೊತೆ ಮೋದಿ ದೂರವಾಣಿ ಸಂಭಾಷಣೆ: ಪಾಕಿಸ್ತಾನದ ಬಗ್ಗೆ ಮಾತುಕತೆ


      ನವದೆಹಲಿ: ಪ್ರಧಾನಿ ನರೇಂದ್ರ ಮೋದಿ  ನಿನ್ನೆ(ಆ.19) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಮಹತ್ವದ ದೂರವಾಣಿ ಸಂಭಾಷಣೆ ನಡೆಸಿದ್ದಾರೆ.
           ಮಾತುಕತೆ ವೇಳೆ ಭಾರತದ ವಿರುದ್ಧ ದ್ವೇಷ ಕಾರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಗಳ ಬಗ್ಗೆ ಮೋದಿ ಉಲ್ಲೇಖಿಸಿದ್ದು, ಈ ರೀತಿಯ ದ್ವೇಷಪೂರಿತ ಹೇಳಿಕೆಗಳು ಶಾಂತಿಗೆ ಪೂರಕವಾಗಿರುವುದಿಲ್ಲ ಎಂದು ಟ್ರಂಪ್ ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
       ಅರ್ಧ ಗಂಟೆ (30 ನಿಮಿಷ) ಮೋದಿ ಟ್ರಂಪ್ ಜೊತೆ ಮಾತನಾಡಿದ್ದು, ಈ ವೇಳೆ ದ್ವಿಪಕ್ಷೀಯ ಹಾಗೂ ಪ್ರಾದೇಶಿಕ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಪ್ರಧಾನಿ ಕಾರ್ಯಾಲಯ ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಉಭಯ ನಾಯಕರ ಮಾತುಕತೆ ಸೌಹಾರ್ದಯುತವಾಗಿತ್ತು ಎಂದಷ್ಟೇ ಹೇಳಿದೆ. ಪ್ರಾದೇಶಿಕ ಪರಿಸ್ಥಿತಿಯ ವಿಷಯ ಮಾತನಾಡಿದಾಗ ಪರೋಕ್ಷವಾಗಿ ಪಾಕಿಸ್ತಾನದ ಭಾರತ ವಿರೋಧಿ ಹೇಳಿಕೆಗಳನ್ನು ಉಲ್ಲೇಖಿಸಿರುವ ಪ್ರಧಾನಿ ನರೇಂದ್ರ ಮೋದಿ ಪ್ರಾದೇಶಿಕ ಶಾಂತಿಕೆ ಕೆಲವು ನಾಯಕರ ಹೇಳಿಕೆ ಪೂರಕವಾಗಿಲ್ಲ ಎಂದು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries