HEALTH TIPS

ಶ್ರೀನಗರದಲ್ಲಿ ಭಾರಿ ಪ್ರತಿಭಟನೆ ಕುರಿತ ವರದಿ ತಳ್ಳಿಹಾಕಿರುವ ಕೇಂದ್ರ ಗೃಹಸಚಿವಾಲಯ

               
     ನವದೆಹಲಿ: ಜಮ್ಮು-ಕಾಶ್ಮೀರದ ರಾಜಧಾನಿ  ಶ್ರೀನಗರದಲ್ಲಿ 10 ಸಾವಿರಕ್ಕೂ ಹೆಚ್ಚುಮಂದಿ ಜಮಾವಣೆಗೊಂಡು ಭಾರಿ ಪ್ರತಿಭಟನೆ ನಡೆಸಿದ್ದಾರೆ ಎಂಬ ವರದಿಗಳನ್ನು  ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಶನಿವಾರ ತಳ್ಳಿಹಾಕಿದ್ದು, ಈ ಕುರಿತ  ಮಾಧ್ಯಮಗಳ ವರದಿ ಕಪೋಲ ಕಲ್ಪಿತ ಹಾಗೂ ಸುಳ್ಳು ಎಂದು ಹೇಳಿದೆ.
      ರಾಯಿಟರ್ಸ್ ಸುದ್ದಿ ಸಂಸ್ಥೆ  ಮೊದಲು ಈ ವರದಿಯನ್ನು ಪ್ರಕಟಿಸಿತ್ತು. ಈ ವರದಿಯನ್ನು ಆಧರಿಸಿ   ಪಾಕಿಸ್ತಾನದ ಡಾನ್  ದಿನ ಪತ್ರಿಕೆ  ಶ್ರೀನಗರದಲ್ಲಿ  10 ಸಾವಿರಕ್ಕೂ ಹೆಚ್ಚಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ಎಂದು ವರದಿಮಾಡಿದೆ. ಈ ವರದಿ ಸಂಪೂರ್ಣ ಕಪೋಲ ಕಲ್ಪಿತ ಹಾಗೂ  ಸುಳ್ಳಿನಿಂದ ಕೂಡಿದೆ ಎಂದು  ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
     ಶ್ರೀನಗರ ಹಾಗೂ ಬಾರಾಮುಲ್ಲದಲ್ಲಿ   ಕೆಲವು  ಬೆರಳೆಣಿಕೆಯ ಜನರು  ಅಲ್ಲಲ್ಲಿ  ಪ್ರತಿಭಟನೆ ನಡೆಸಿದ್ದಾರೆ.  ಈ ಪ್ರತಿಭಟನೆಗಳಲ್ಲಿ  20 ಕ್ಕೂ ಹೆಚ್ಚಿನ ಜನರು ಭಾಗವಹಿಸಿರಲಿಲ್ಲ  ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
     ಕಳೆದ ಆಗಸ್ಟ್  6 ರಂದು ಜಮ್ಮು ಕಾಶ್ಮೀರವನ್ನು  ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸುವ  ಜಮ್ಮು ಮತ್ತು ಕಾಶ್ಮೀರ ಪುನರ್ ವಿಂಗಡನಾ ವಿಧೇಯಕಕ್ಕೆ  ಸಂಸತ್ತು ಅನುಮೋದನೆ ನೀಡಿದ ನಂತರ ರಾಜ್ಯದಲ್ಲಿ 144ರ ನಿಷೇಧಾ ಜ್ಞೆ  ವಿಧಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries