ಬದಿಯಡ್ಕ: ಚೆರ್ಕಳ ಕಲ್ಲಡ್ಕ ಅಂತಾರಾಜ್ಯ ರಸ್ತೆಯ ಕರಿಂಬಿಲದಲ್ಲಿ ಕುಸಿದು ಬಿದ್ದ ಗುಡ್ಡದ ಮಣ್ಣನ್ನು ತೆರವುಗೊಳಿಸುವ ಕಾರ್ಯವು ಒಂದು ಹಂತದಲ್ಲಿ ಪೂರ್ಣಗೊಂಡಿದೆ. ಬುಧವಾರ ಸಂಜೆ ವೇಳೆ ರಸ್ತೆಗೆ ಜಲ್ಲಿಹುಡಿಯನ್ನು ಸುರಿಯಲಾಗಿದ್ದು, ಗುರುವಾರ (ಇಂದು) ವಾಹನ ಸಂಚಾರ ಪುನರಾರಂಭಗೊಳ್ಳುವ ಹಂತಕ್ಕೆ ತಲುಪಿದೆ. ರಸ್ತೆಯು ಸಂಪೂರ್ಣ ಕೆಸರುಮಯವಾಗಿದ್ದು, ವಾಹನ ಚಾಲನೆ ಕಷ್ಟಕರವಾಗಲಿದೆ. ಶಾಲೆಗಳಲ್ಲಿ ಪರೀಕ್ಷೆ ಆರಂಭವಾಗಿದ್ದು ಮಕ್ಕಳು ಸಮಯಕ್ಕೆ ಸರಿಯಾಗಿ ಶಾಲೆಯನ್ನು ತಲುಪಲು ಕಷ್ಟಪಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸೋಮವಾರವೇ ರಸ್ತೆಯನ್ನು ಸಂಚಾರಯೋಗ್ಯವನ್ನಾಗಿಸಬೇಕೆಂಬ ಬೇಡಿಕೆ ಜನರದ್ದಾಗಿತ್ತು. ರಸ್ತೆಯು ಕೆಸರುಮಯವಾಗಿದ್ದು, ಗುಡ್ಡದ ಅಡಿಭಾಗದಿಂದ ನೀರಿನ ಒರತೆ ಬರುತ್ತಿದ್ದು, ನೀರು ಸರಾಗವಾಗಿ ಹರಿದು ರಸ್ತೆಯಲ್ಲೇ ಸಾಗುತ್ತಿದೆ. ಪ್ರಸ್ತುತ ವ್ಯವಸ್ಥೆಯು ತಾತ್ಕಾಲಿಕ ಪರಿಹಾರವಾಗಬಹುದೇ ವಿನಹ ಎಷ್ಟುದಿನ, ಎಷ್ಟುಹೊತ್ತು ವಾಹನ ಸಂಚಾರ ನಡೆಸಬಹುದು ಎಂದು ಭಾವಿಸುದು ಕಷ್ಟಸಾಧ್ಯ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ವಾಹನ ಸಂಚಾರ ಇಂದಿನಿಂದ ಪುನರಾರಂಭಗೊಳ್ಳುವ ಎಲ್ಲಾ ಲಕ್ಷಣಗಳೂ ಗೋಚರವಾಗಿದೆ.
ಮಣ್ಣು ತೆರವು ಕಾರ್ಯ ಪೂರ್ಣ : ಇಂದಿನಿಂದ ವಾಹನ ಸಂಚಾರ ಸಾಧ್ಯತೆ
0
ಆಗಸ್ಟ್ 28, 2019