ಉಪ್ಪಳ: ಕೇರಳವು ತಪೆÇೀಭೂಮಿ, ಪುಣ್ಯಭೂಮಿ. ಆದರೆ ಇತ್ತೀಚೆಗಿನ ದಿನಗಳಲ್ಲಿ ರಾಜ್ಯಕ್ಕೆ ಬಹುದೊಡ್ಡ ಶಾಪ ತಟ್ಟಿದೆ. ಆದಕಾರಣವೇ ಮಹಾಪ್ರವಾಹ, ಬರಗಾಲದಂತಹ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿವೆ. ಈ ನಿಟ್ಟಿನಲ್ಲಿ ರಾಜ್ಯವನ್ನು ಆಳುತ್ತಿರುವವರು ಗಮನಿಸಿ ಎಲ್ಲಿ ತಪ್ಪು ನಡೆದಿದೆ ಎಂಬುದನ್ನು ಚಿಂತಿಸುವ ಕಾಲ ಸನ್ನಿಹಿತವಾಗಿದೆ ಎಂದು ವಿಶ್ವ ಹಿಂದು ಪರಿಷತ್‍ನ ಮಂಗಳೂರು ಗ್ರಾಮಾಂತರ ಜಿಲ್ಲಾ ಸತ್ಸಂಗ ಪ್ರಮುಖ್, ಹರಿದಾಸ ಜಯಾನಂದಕುಮಾರ್ ಹೊಸದುರ್ಗ ಹೇಳಿದ್ದಾರೆ.
ವಿಶ್ವ ಹಿಂದು ಪರಿಷತ್, ಬಜರಂಗ ದಳ, ಅಷ್ಟಮಿ ಉತ್ಸವ ಸಮಿತಿ, ಮಹಿಳಾ ಸಮಿತಿ ಪರಂಬಳ ಕಯ್ಯಾರು ಇವುಗಳ ನೇತೃತ್ವದಲ್ಲಿ 16ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕಯ್ಯಾರಿನಲ್ಲಿ ಜರಗಿದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಅವರು ಮುಖ್ಯ ಭಾಷಣ ಮಾಡಿದರು.
ಧರ್ಮ ಸಂಸ್ಥಾಪನೆಗೆ ಶ್ರೀಕೃಷ್ಣ ಪರಮಾತ್ಮನು ಮತ್ತೆ ಮತ್ತೆ ಅವತರಿಸುತ್ತಾನೆ. ಕಲಿಯುಗದಲ್ಲಿ ಹರಿನಾಮವನ್ನು ಮಾಡಿದರೆ ಬದುಕು ಸಾರ್ಥಕವಾಗುವುದು. ಧರ್ಮಪ್ರಜ್ಞೆಯಿಂದ ಜೀವಿಸಿ ಒಳ್ಳೆತನವನ್ನು ಬೆಳೆಸಿಕೊಂಡಾಗ ಶಾಂತಿ, ನೆಮ್ಮದಿ, ಸುಖ ಲಭಿಸುವುದು. ಸಂಸ್ಕಾರ ಮತ್ತು ಸಂಸ್ಕøತಿಗಳನ್ನು ಮೈಗೂಡಿಸಿಕೊಂಡು ಕರ್ಮಗಳನ್ನು ಮಾಡಿದಾಗ ಕರ್ತವ್ಯ ಪಾಲಿಸಿದಂತಾಗುತ್ತದೆ. ಈ ಮೂಲಕ ಶ್ರೀಕೃಷ್ಣನ ಆದರ್ಶ ಗುಣಗಳನ್ನು ಕಾರ್ಯರೂಪಕ್ಕೆ ತಂದಂತಾಗುತ್ತದೆ ಎಂದು ಅವರು ನುಡಿದರು.
ಆರ್‍ಎಸ್‍ಎಸ್ ಕುಟುಂಬ ಪ್ರಭೋದನ್ ಮಂಜೇಶ್ವರ ತಾಲೂಕು ಪ್ರಮುಖ್ ಕುಂಞಣ್ಣ ರೈ ಕಯ್ಯಾರು ಅಧ್ಯಕ್ಷತೆ ವಹಿಸಿದ್ದರು. ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್‍ನ ಅಧ್ಯಕ್ಷ ಶ್ರೀಧರ ಹೊಳ್ಳ ಕಯ್ಯಾರು, ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರೀ ಹೈಯರ್ ಸೆಕೆಂಡರಿ ಶಾಲಾ ಮೆನೇಜರ್ ಎನ್.ಶಂಕರನಾರಾಯಣ ಭಟ್, ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯ ಪ್ರಸಾದ್ ರೈ ಕಯ್ಯಾರು, ಪೈವಳಿಕೆ ಗ್ರಾಮ ಪಂಚಾಯತ್ ಸದಸ್ಯೆ
ರಾಜೀವಿ ಪಿ.ರೈ ಕಯ್ಯಾರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಗಣೇಶ್ ಪೆÇನ್ನೆತ್ತೋಡು ವಂದೇ ಮಾತರಂ ಹಾಡಿದರು. ಸತೀಶ್‍ಕುಮಾರ್ ಕಾಪು ಸ್ವಾಗತಿಸಿ, ಗಿರೀಶ್‍ಕುಮಾರ್ ಕಯ್ಯಾರು ವಂದಿಸಿದರು. ಸುಬ್ರಹ್ಮಣ್ಯ ಪೆರಿಯಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಬೆಳಗ್ಗೆ ದೀಪ ಪ್ರಜ್ವಲನೆ, ಭಜನೆ, ವಿವಿಧ ಸ್ಪರ್ಧಾ ಕಾರ್ಯಕ್ರಮ, ಚೇವಾರು ಶಂಕರ ಕಾಮತ್ ನೇತೃತ್ವದ ಶ್ರುತಿಲಯ ಚೇವಾರು ತಂಡದವರಿಂದ ಭಾವ ಗಾನ ಸಂಗಮ ಮನೋರಂಜನಾ ಕಾರ್ಯಕ್ರಮ, ಮಧ್ಯಾಹ್ನ ಭೋಜನ, ಸಂಜೆ ಮಡಿಕೆ ಒಡೆಯುವುದು ಮುಂತಾದ ಕಾರ್ಯಕ್ರಮ ನಡೆಯಿತು.


