ಮಂಜೇಶ್ವರ: ಶ್ರೀ ಮಹಾಲಿಂಗೇಶ್ವರ ಕುಣಿತ ಭಜನಾ ಸಂಘ ಚಿಗುರುಪಾದೆ ಇದರ 5ನೇ ವಾರ್ಷಿಕೋತ್ಸವವು ಇತ್ತೀಚೆಗೆ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಂಭ್ರಮದಿಂದ ಜರಗಿತು.
ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಹಾಲಿಂಗೇಶ್ವರ ಸೇವಾಟ್ರಸ್ಟ್‍ನ ಅಧ್ಯಕ್ಷೆ ಪ್ರೇಮಾ ಕೆ ಭಟ್ ತೊಟ್ಟೆತ್ತೋಡಿ ವಹಿಸಿದ್ದರು. ನಾಡಿನ ಹಿರಿಯ ಭಜನಾ ಸಂಕೀರ್ತನಾಕಾರ ಪಿ.ಎಲ್.ನಾರಾಯಣ ರನ್ನು ಗಣ್ಯರ ಸಮಕ್ಷಮ ಸನ್ಮಾನಿಸಲಾಯಿತು. ವಸಂತ ಭಟ್ ತೊಟ್ಟೆತ್ತೋಡಿ, ವೇದಮೂರ್ತಿ ಗಣೇಶ ನಾವಡ, ಮಾರಪ್ಪ ಭಂಡಾರಿ ಕೌಡೂರು ಉಪಸ್ಥಿತರಿದ್ದರು. ರಾಜಾರಾಮ ರಾವ್ ಚಿಗುರುಪಾದೆ ಸಭಾ ನಿರ್ವಹಣೆ ಗೈದು ಸನ್ಮಾನಿತರ ಬಗ್ಗೆ ಅಭಿನಂದನಾ ನುಡಿಗಳನ್ನಾಡಿದರು. ಪುಷ್ಪರಾಜ ಶೆಟ್ಟಿ ತಲೇಕಳ ಸ್ವಾಗತಿಸಿ ವಂದಿಸಿದರು.
ಬಳಿಕ ನಡೆದ ಭಜನಾ ಕಾರ್ಯಕ್ರಮವನ್ನು ಹಿರಿಯ ಭಜನಾ ಸಂಕೀರ್ತನಕಾರ ಮಾರಪ್ಪ ಭಂಡಾರಿ ಕೌಡೂರು ದೀಪಬೆಳಗಿಸಿ ಉದ್ಘಾಟಿಸಿದರು. ಸರಣಿ ಭಜನಾ ಕಾರ್ಯಕ್ರಮದಲ್ಲಿ ಶ್ರೀ ಮಹಾಲಿಂಗೇಶ್ವರ ಕುಣಿತ ಭಜನಾ ಸಂಘ ಚಿಗುರುಪಾದೆ, ಶ್ರೀ ಮಹಾವಿಷ್ಣು ಮೂರ್ತಿ ಕುಣಿತ ಭಜನಾ ಸಂಘ ಹೇರೂರು, ಶ್ರೀ ರಾಜರಾಜೇಶ್ವರ ಕುಣಿತ ಭಜನಾ ಸಂಘ ಬೇಡಗುಡ್ಡೆ, ತಂಡಗಳು ಭಾಗವಹಿಸಿದ್ದವು.


