ಕುಂಬಳೆ: ಮುಳ್ಳೇರಿಯಾ ಹವ್ಯಕ ಮಂಡಲದ ನೇತೃತ್ವದಲ್ಲಿ ಕುಂಬಳೆ ವಲಯದ ಆಶ್ರಯದಲ್ಲಿ ಶ್ರೀಭಾರತೀ ವಿದ್ಯಾಪೀಠ, ಮುಜುಂಗಾವಿನಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ ಜರಗಿತು.
ಶಂಖನಾದ ಗುರುವಂದನೆಯೊಂದಿಗೆ ಸಮಾರಂಭವು ಪ್ರಾರಂಭವಾಯಿತು. ಮಹಾದೇವ ಕೋಣಮ್ಮೆ ಇವರು ವೈದಿಕ ಕಾರ್ಯವನ್ನು ನಡೆಸಿದರು.
ಪೂಜಾಕಾರ್ಯವನ್ನು ವಲಯಾಧ್ಯಕ್ಷರಾದ ಬಾಲಕೃಷ್ಣ ಶರ್ಮ ದಂಪತಿಗಳು ನೆರವೇರಿಸಿದರು. ಮಂಡಲ ಮಾತೃಪ್ರಧಾನೆ ಕುಸುಮಾ ಪೆರ್ಮುಖ ಇವರ ನೇತೃತ್ವದಲ್ಲಿ ಮಾತೆಯರಿಂದ ಕುಂಕುಮಾರ್ಚನೆ ಮತ್ತು ಲಕ್ಷ್ಮೀನರಸಿಂಹ ಕರಾವಲಂಬ ಸ್ತೋತ್ರ ಪಾರಾಯಣ ಮಾಡಲಾಯಿತು. ಮಂಡಲ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ ಸಮಸ್ತ ಸಮಾಜಕ್ಕೆ ಒಳಿತಾಗಲಿ ಎಂದು ಪ್ರಾರ್ಥಿಸಿದರು. ಮಂಡಲ ಪದಾಧಿಕಾರಿಗಳು ವಲಯ ಪದಾಧಿಕಾರಿಗಳು ಗುರಿಕ್ಕಾರರು ಕಾರ್ಯಕರ್ತರು ಭಾಗವಹಿಸಿದ್ದರು.


