HEALTH TIPS

ಬೀಚ್ ಕ್ಲೀನಿಂಗ್ ವೇಳೆ ಕೈಯಲ್ಲಿದಿದ್ದೇನು?.. ಕೊನೆಗೂ ಉತ್ತರಿಸಿದ ಪ್ರಧಾನಿ ಮೋದಿ

     
      ಚೆನ್ನೈ: ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭೇಟಿ ವೇಳೆ ಮಮ್ಮಲಾಪುರಂ ಬೀಚ್ ನಲ್ಲಿ ವಾಕಿಂಗ್ ಮಾಡಿದ್ದ ಪ್ರಧಾನಿ ಮೋದಿ ಬೀಚ್ ಕ್ಲೀನಿಂಗ್ ನಲ್ಲಿ ತೊಡಗಿದ್ದರು. ಆದರೆ ಮೋದಿ ಬೀಚ್ ಕ್ಲೀನಿಂಗ್ ಗಿಂತ ಅವರ ಕೈಯಲ್ಲಿದ್ದ ವಸ್ತುವೊಂದು ಸುದ್ದಿಗೆ ಗ್ರಾಸವಾಗಿತ್ತು. ಇದೀಗ ಈ ವಸ್ತು ಏನು ಎಂದು ಇದೀಗ ಪ್ರಧಾನಿ ಮೋದಿ ಮಾಹಿತಿ ನೀಡಿದ್ದಾರೆ.
      ನಿನ್ನೆ ತಮಿಳುನಾಡಿನ ಮಹಾಬಲಿಪುರಂನ ಬೀಚ್ ನಲ್ಲಿ ಬೆಳ್ಳಂಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ  ಜಾಗಿಂಗ್ ಮಾಡಿದ್ದರು. ಈ ವೇಳೆ ಜಾಗಿಂಗ್ ಮಾಡುತ್ತಾ ಕಸವನ್ನ ಆಯ್ದು ಸ್ವಚ್ಛ ಮಾಡಿದರು.. ಮೋದಿ ಸುಮಾರು ಅರ್ಧ ಗಂಟೆ ಕಾಲ ಸಮುದ್ರ ತೀರದಲ್ಲಿ ಕಸ ಹಾಗೂ ಪ್ಲಾಸ್ಟಿಕ್ ಬಾಟಲ್ ಗಳನ್ನ ಆಯ್ದು ಸ್ವಚ್ಛತೆ ಪಾಠ ಮಾಡಿದ್ರು. ಈ ವೇಳೆ ಅವರ ಕೈಯಲ್ಲಿದ್ದ ವಸ್ತುವೊಂದು ಜನರಲ್ಲಿ ಕುತೂಹಲ ಮೂಡಿಸಿತ್ತು. ಇದಕ್ಕೆ ಸ್ವತಃ ಮೋದಿಯೇ  ಉತ್ತರ ಕೊಟ್ಟಿದ್ದಾರೆ.
     ಈ ಕುರಿತಂತೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, 'ಪ್ಲಾಗಿಂಗ್ ಮಾಡುವಾಗ ನನ್ನ ಕೈಯಲ್ಲಿ ಇದ್ದಿದ್ದು ಏನು ಅಂತ ಸಾಕಷ್ಟು ಜನ ಕೇಳ್ತಿದ್ದೀರ. ಅದೊಂದು ಆ ಕ್ಯೂ ಪ್ರೆಶರ್ ರೋಲರ್. ನಾನು ಆಗಾಗ ಅದನ್ನು ಬಳಸುತ್ತೇನೆ. ಇದರಿಂದ ನನಗೆ ತುಂಬಾ ಉಪಯೋಗವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಆ ಮೂಲಕ ಜನರಲ್ಲಿದ್ದ ಪ್ರಶ್ನೆ ಮತ್ತು ಗೊಂದಲಕ್ಕೆ ಪ್ರಧಾನಿ ಮೋದಿ ಉತ್ತರಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries