ಕಾಸರಗೊಡು: ಅಂಗನವಾಡಿಗಳ ಮೂಲಕ ಸಂಗ್ರಹಿಸಿ ಒಟ್ಟುಗೂಡಿಸುವ ರೆಜಿಸ್ಟರ್‍ಗಳಲ್ಲಿ ದಾಖಲಿಸುವ ಮಾಹಿತಿಗಳು ಇನ್ನು ಮುಂದೆ ಬೆರಳಂಚಿನಲ್ಲೇ ಲಭಿಸಲಿವೆ. ಇವನ್ನು ಪೂರ್ಣ ರೂಪದಲ್ಲಿ ಡಿಜಿಟಲೈಸೇಷನ್ ನಡೆಸುವ ಚಟುವಟಿಕೆಗಳು ಜಿಲ್ಲೆಯಲ್ಲಿ ಆರಂಭಗೊಂಡಿವೆ. ಈ ಬಗ್ಗೆ ಮಾಹಿತಿ ಸಂಗ್ರಹಕ್ಕಾಗಿ ಐ.ಸಿ.ಡಿ.ಎಸ್.ಸಿ.ಎ.ಎಸ್. ಎಂಬ ಆಪ್ ಬಳಸಲಾಗುವುದು.
'ಸಂತುಷ್ಠ ಕೇರಳ'ಎಂಬ ಯೋಜನೆಯ ಅಂಗವಾಗಿ ರಾಜ್ಯದಲ್ಲಿ ಯೋಜನೆ ಜಾರಿಗೊಳ್ಳುತ್ತಿದೆ. ಸ್ಮಾರ್ಟ್ ಫೆÇನ್, ಬಿಎಸ್ಸೆನ್ನೆಲ್ ಸಂಪರ್ಕ, ಪವರ್‍ಬ್ಯಾಂಕ್, ಚಾರ್ಜರ್, ಹೆಡ್ ಸೆಟ್ ಇತ್ಯಾದಿ ಸಹಿತ ಒಂದು ಯೂನಿಟ್ 10ಸಾವಿರ ರೂ. ಮೌಲ್ಯ ಹೊಂದಿದೆ. ಈ ಮೊತ್ತದಲ್ಲಿ ಶೇ60ಕೇಂದ್ರ ಹಾಗೂ ಶೇ.40 ರಾಜ್ಯ ಸರ್ಕಾರ ವಹಿಸಲಿದೆ. ಅಂಗನವಾಡಿ ವ್ಯಾಪ್ತಿಯ ಕುಟುಂಬಗಳ ಮಾಹಿತಿ, ಪ್ರತಿದಿನ ಆಹಾರ ವಿತರಣೆ, ವಸತಿ ಸಂದರ್ಶನ, ಯೋಜನೆ ಪಟ್ಟಿ, ಬೆಳವಣಿಗೆ ನಿಗಾ, ಪ್ರತಿರೋಧ ಚುಚ್ಚುಮದ್ದು, ಪ್ರತಿ ತಿಂಗಳ ಪ್ರಗತಿ ವರದಿ, ಯುವತಿಯರಿಗಾಗಿ ಸಮಾಜ ಕೇಂದ್ರಿತಚಟುವಟಿಕೆಗಳು ಇತ್ಯಾದಿ ಮಾಹಿತಿ ಈ ಆಪ್ ಹೊಂದಿದೆ. ಈ 10 ಮೊಡ್ಯೂಲ್ ಮಾಹಿತಿ ಆಯಾ ಸಿ.ಡಿ.ಪಿ.ಒ. ಗಳಿಗೆ ಮತ್ತು ಸಪರ್‍ವೈಸರ್‍ಗಳಿಗೆ ಲಭಿಸಲಿದೆ. ಸಂಬಂಧಪಟ್ಟ ಫಲಾನುಭವಿಗಳಿಗೆ ಎಸ್.ಎಂ.ಎಸ್ ಮೂಲಕ ಮಾಹಿತಿ ಲಭಿಸಲಿದೆ. ಈ ಸಂಬಂಧ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊದಲ ಹಂತದ ತರಬೇತಿ ಪೂರ್ತಿಗೊಂಡಿದೆ. ಜಿಲ್ಲೆಯಲ್ಲಿ 1348 ಅಂಗನವಾಡಿಗಳಿಗೆ ಇದಕ್ಕಾಗಿ ಸ್ಮಾರ್ಟ್ ಫೆÇೀನ್ ವಿತರಣೆ ನಡೆಸಲಾಗಿದೆ. ಅಂಗನವಾಡಿ ಸೇವೆಗಳಿಗೆ ಸಂಬಂಧಿಸಿ ಮಾಹಿತಿಗಳನ್ನು ಸ್ಮಾರ್ಟ್ ಫೆÇೀನ್‍ಗಳ ಐ.ಸಿ.ಡಿ.ಎಸ್-ಸಿ.ಎ.ಎಸ್. ಎಂಬ ಸಾಫ್ಟ್‍ವೇರ್‍ಗೆ ದಾಖಸಲಾಗಿದೆ. ಇದಕ್ಕಾಗಿ ಅಂಗನವಾಡಿ ಕಾರ್ಯಕರ್ತೆಯರು ವಸತಿ ಸಂದರ್ಶನ ನಡೆಸಿ ವ್ಯಕ್ತಿಗಳ ಅದಾರ್ ಕಾರ್ಡ್ ಮಾಹಿತಿಗಳನ್ನು ಸ್ಕ್ಯಾನ್ ನಡೆಸಬೇಕಾಗಿದೆ. ಪ್ರಸಕ್ತ ಫೆÇೀನ್‍ಗೆ ಅಪ್ ಲೋಡ್ ನಡೆಸುವ ಕಾರ್ಯ ಮುಂದುವರಿಯುತ್ತಿದೆ. ಅಂಗನವಾಡಿಗಳ ಮೂಲಕ ಸಮಾಜಕ್ಕೆ ಲಭಿಸುವ ಸೇವೆಗಳನ್ನು ಸುಧಾರಿತಗೊಳಿಸುವ ಈ ಚಟುವಟಿಕೆಗಳಲ್ಲಿ ಸಾರ್ವಜನಿಕರಿಗೆ ಯಾವುದೇ ಸಂಶಯ ತಲೆದೋರದಂತೆ ನಡೆಸಲಾಗುತ್ತಿದೆ. ಈ ಬಗ್ಗೆ ಅಂಗನವಾಡಿ ನೌಕರರು ನಡೆಸುವ ಯತ್ನಗಳಿಗೆ ಸಾರ್ವಜನಿಕರು ಸಹಕರಿಸುವಂತೆಯೂ ಮನವಿಮಾಡಲಾಗಿದೆ.
ಜಿಲ್ಲಾಧಿಕಾರಿ ಕ್ಯಾಂಪ್ ಹೌಸ್ ಭೇಟಿ:
ಈ ಚಟುವಟಿಕೆಗಳ ಅಂಗವಾಗಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ಕ್ಯಾಂಪ್ ಹೌಸ್‍ಗೆ ತೆರಳಿ ಮಾಹಿತಿ ಸಂಗ್ರಹಿಸಲಾಯಿತು. ಚೆಂಗಳ ಗ್ರಾಮಪಂಚಾಯತ್ ಅಧ್ಯಕ್ಷೆ ಷಾಹಿನಾ ಸಲೀಂ, ಐ.ಸಿ.ಡಿ.ಎಸ್. ಜಿಲ್ಲಾ ಯೋಜನೆ ಅಧಿಕಾರಿ ಕವಿತಾರಾಣಿ, ಗ್ರಾಮಪಂಚಾಯತ್ ಸದಸ್ಯ ಸದಾನಂದನ್, ಐ.ಸಿ.ಡಿ.ಎಸ್. ಮೇಲ್ವಿಚಾರಕರು, ಅಂಗನವಾಡಿ ಶಿಕ್ಷಕಿಯರು ಉಪಸ್ಥಿತರಿದ್ದರು.


