HEALTH TIPS

ಹಿಂದುಳಿದ ಜನಾಂಗ ಅಭಿವೃದ್ಧಿ ನಿಗಮದಿಂದ ಜನಜಾಗೃತಿ ಶಿಬಿರ ಮತ್ತು ಸಾಲ ವಿತರಣೆ

         

        ಕಾಸರಗೋಡು: ಹಿಂದುಳಿದ ಜನಾಂಗ ಅಭಿವೃದ್ಧಿ ನಿಗಮ ಜಿಲ್ಲಾ ಕಚೇರಿ ವತಿಯಿಂದ ರಾಷ್ಟ್ರೀಯ ಹಿಂದುಳಿದ ಜನಾಂಗ ಹಣಕಾಸು ಅಭಿವೃದ್ಧಿ ನಿಗಮದ ಸಹಕಾರದಿಂದ ಉದುಮಾದಲ್ಲಿ ಜನಜಾಗೃತಿ ಶಿಬಿರ ಮತ್ತು ಸಾಲ ವಿತರಣೆ ಕಾರ್ಯಕ್ರಮ ಜರುಗಿತು.
      ವಿವಿಧ ಯೋಜನೆಗಳ ಮೂಲಕ 137 ಫಲಾನುಭವಿಗಳಿಗೆ ಸಮಾರಂಭದಲ್ಲಿ 2.5 ಕೋಟಿ ರೂ. ಮೊತ್ತವನ್ನು ಸಾಲವಾಗಿ ವಿತರಿಸಲಾಯಿತು. ಶಾಸಕ ಕೆ.ಕುಞÂರಾಮನ್ ಸಮಾರಂಭ ಉದ್ಘಾಟಿಸಿದರು. ಕೆ.ಎಸ್.ಬಿ.ಸಿ.ಡಿ.ಸಿ. ಅಧ್ಯಕ್ಷ ಟಿ.ಕೆ.ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಉದುಮ ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎ.ಮಹಮ್ಮದಾಲಿ, ಸದಸ್ಯ ಎನ್.ಚಂದ್ರನ್, ಶಿಶು ಕಲ್ಯಾಣ ಸಮಿತಿ ಜಿಲ್ಲಾ ಕಾರ್ಯದರ್ಶಿ ಮಧು ಮುದಿಯಕ್ಕಾಲ್, ಪಂಚಾಯಿತಿ  ಸಿ.ಡಿ.ಎಸ್.ಅಧ್ಯಕ್ಷೆ ಪುಷ್ಪಲತಾ, ಮಂಜೇಶ್ವರ ಗ್ರಾಮಪಂಚಾಯಿತಿ ಸಿ.ಡಿ.ಎಸ್.ಅಧ್ಯಕ್ಷೆ ಜ್ಯೋತಿಪ್ರಭಾ ಉಪಸ್ಥಿತರಿದ್ದರು. ನಿಗಮದ ಯೋಜನೆ ಸಹಾಯಕ ಪ್ರಬಂಧಕಿ ಎ.ವಿ.ಕೃಷ್ಣಕುಮಾರಿ ವಿವಿಧ ಯೋಜನೆಗಳ ಕುರಿತು ತರಗತಿನಡೆಸಿದರು. 'ಕೈಗಾರಿಕಾ  ಅಭಿವೃದ್ಧಿ' ಎಂಬ ವಿಷಯದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ ನಿವೃತ್ತ ಸಹಾಯಕ ನಿರ್ದೇಶಕ ಟಿ.ದಿನೇಶನ್ ವಿಚಾರ ಸಂಕಿರಣ ನಡೆಸಿಕೊಟ್ಟರು.  ಎನ್.ಎಂ.ಮೋಹನನ್ ಸ್ವಾಗತಿಸಿದರು. ಜಿಲ್ಲಾ ಪ್ರಬಂಧಕ ಪಿ.ಶ್ರೀಕುಮಾರ್ ವಂದಿಸಿದರು.
        ನಿಗಮದ ಜನಪರ ಧೋರಣೆ:
    ಜಿಲ್ಲೆಯಲ್ಲಿ ಈ ವರೆಗೆ ವಿವಿಧ ಯೋಜನೆಗಳಿಗಾಗಿ 2 ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ 230 ಕೋಟಿ ರೂ., 16 ಗ್ರಾಮಪಂಚಾಯತ್ ಗಳಲ್ಲಿ ಕುಟುಂಬಶ್ರೀ ಮುಖಾಂತರ ಮೈಕ್ರೋ ಕ್ರೆಡಿಟ್ ಸಾಲ ಯೋಜನೆಯ ಮೂಲಕ 10 ಕೋಟಿ ರೂ.ಗೂಮಿಕ್ಕು ಸಾಲವಿತರಿಸಲಾಗಿದೆ. ಸ್ವ ಉದ್ಯೋಗ, ವಿವಾಹ, ವಸತಿ ಪುನರ್ ನಿರ್ಮಾಣ, ಶಿಕ್ಷಣ ವಲಯಗಳಲ್ಲಿ ಸಾಲ ಯೋಜನೆಗಳನ್ನುನಿಗಮ ಜಾರಿಗೊಳಿಸಿದೆ. ಜತೆಗೆ ಪಕ್ಷಪಾತ ಧೋರಣೆಯಿಲ್ಲದೆ, ಸುಗಮ ರೀತಿ ಚಟುವಟಿಕೆ ನಡೆಸಿ, ಕಡಿಮೆ ಬಡ್ಡಿ, ಸರಳ ವ್ಯವಹಾರ,ಮರುಪಾವತಿಗೆ ಸುಲಭ ಮಾರ್ಗ, ಸುಲಲಿತ ನಿಬಂಧನೆಗಳು, ಕಡಿಮೆ ಪೆÇ್ರಸೆಸಿಂಗ್ ಶುಲ್ಕ, ಬ್ಯಾಂಕ್ ಗಳ ಮೂಲಕ ಮರುಪಾವತಿಗೆವ್ಯವಸ್ಥೆ ಇತ್ಯಾದಿಗಳು ನಿಗಮವನ್ನು ಜನಪರಗೊಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries