ಕಾಸರಗೋಡು: ರಾಜ್ಯ 60ನೇ ಶಾಲಾ ಕಲೋತ್ಸವದ ನಾನಾ ಸ್ಪರ್ಧೆಗಳಿಗೆ ತೀರ್ಪು ಕಲ್ಪಿಸಲು ಆಗಮಿಸುವವರ ಮೇಲೆ ನಿಗಾಯಿರಿಸಲು ವಿಜಿಲೆನ್ಸ್ ಆಂಡ್ ಆಂಟಿ ಕರಪ್ಶನ್ ಬ್ಯೂರೋ ಸಿದ್ಧತೆ ಆರಂಭಿಸಿದೆ. ತೀರ್ಪುಗಾರರನ್ನು ಓಲೈಸುವ ಮೂಲಕ ತಮ್ಮ ಸ್ಪರ್ಧಾಳುಗಳಿಗೆ ಅಂಕ ಲಭ್ಯವಾಗುವಂತೆ ಮಾಡುವುದು ಹಾಗೂ ತೀರ್ಪುಗಾರರನ್ನು ತಮ್ಮಪರ ನಿಲ್ಲುವಂತೆ ಮಾಡುವ ನಿಟ್ಟಿನಲ್ಲಿ ಶ್ರಮ ನಡೆಯುವುದನ್ನು ತಡೆಗಟ್ಟುವ ನಿಟ್ಟನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ.
ಡಿವೈಎಸ್‍ಪಿ ಕೆ. ದಾಮೋದರನ್ ನೇತೃತ್ವದಲ್ಲಿ ಕಾರ್ಯಯೋಜನೆ ತಯಾರಿಸಲಾಗುತ್ತಿದೆ. ತೀರ್ಪುಗಾರರು ವಾಸಿಸುತ್ತಿರುವ ಸ್ಥಳ< ಅವರು ಪ್ರಯಾಣಿಸುವ ವಾಹನಗಳು ಮೊದಲಾದುವುದುಗಳ ಬಗ್ಗೆ ನಿಗಾಯಿರಿಸಲಾಗುವುದು. ಇದಕ್ಕಾಗಿ ಮಹಿಳಾ ಪೊಲೀಸರನ್ನೂ ನಿಯೋಜಿಸಲಾಗುವುದು. ಸ್ಪರ್ಧೆಗಳಲ್ಲಿ ತೀರ್ಪು ಕಲ್ಪಿಸುವ ಸಂದರ್ಭ ಪಕ್ಷಪಾತ ನಿಲುವು ಅನುಸರಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲೂ ತೀರ್ಮಾನಿಸಲಾಗಿದೆ. ಕಾಸರಗೋಡು ಜಿಲ್ಲಾ ಮಟ್ಟದ ಶಾಲಾ ಕಲೋತ್ಸವದ ನಾನಾ ಸ್ಪರ್ಧೆಗಳ ಬಗ್ಗೆ ನೀಡಿದ ತೀರ್ಪಿನ ವಿರುದ್ಧ ಲೋಪವುಂಟಾಗಿರುವ ಬಗ್ಗೆ ವ್ಯಾಪಕ ದಊರು ಲಭ್ಯವಾಗಿದ್ದು, ಇದು ರಾಜ್ಯಮಟ್ಟದ ಕಲೋತ್ಸವದಲ್ಲಿ ಪುನರಾವರ್ತನೆಯಾಗುವ ಸಾಧ್ಯತೆ ಬಗ್ಗೆ ಈ ಕ್ರಮ ಕೈಗೊಳ್ಳಲಾಗುತ್ತಿದೆ.

