ಕಾಸರಗೋಡು: ದಿನಗಳ ಕಾಲ ಜಿಲ್ಲೆಯ 28 ವೇದಿಕೆಗಳಲ್ಲಿ ನಡೆಯುವ ರಾಜ್ಯ ಮಟ್ಟದ ಶಾಲಾ ಕಲೋತ್ಸದಲ್ಲಿ ವಿವಿಧ ಕಲಾ ಪ್ರಕಾರಗಳ ಸ್ಪರ್ಧೆಗಳ ಬಿರುಸಿನ ನಡುವೆಯೂ ಪ್ರೇಕ್ಷಕರು ಕೊಂಚಬಿಡುವು ಮಾಡಿಕೊಂಡಲ್ಲಿ ಕಲೋತ್ಸವ ಅಂಗವಾಗಿಯೇ ನಡೆಯುವ 'ದಿಶಾ'ಎಂಬ ಹೆಸರಿನ ವಸ್ತು ಪ್ರದರ್ಶನವನ್ನು ವೀಕ್ಷಿಸಬಹುದು.
ಕಾಞಂಗಾಡ್ ಬಲ್ಲ ಈಸ್ಟ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ಎಕ್ಸಿಬಿಷನ್ ನಡೆಯಲಿದೆ. ಇದರಲ್ಲಿ ವಿವಿಧ ವಲಯಗಳ ವಸ್ತುಗಳ ಪ್ರದರ್ಶನ ಮತ್ತು ಮಾರಾಟಗಳು ನಡೆಯಲಿದೆ. ಜತೆಗೆ ರಾಜ್ಯ ಹೈಯರ್‍ಸೆಕೆಂಡರಿ ಶಿಕ್ಷಣ ಇಲಾಖೆ ವ್ಯಾಪ್ತಿಯ ಕೆರಿಯರ್ ಗೈಡೆನ್ಸ್ ಆಂಡ್ ಅಡೋಲ್‍ಸೆಂಟ್ ಕೌನ್ಸೆಲಿಂಗ್ ಸೆಂಟರ್ ವತಿಯಿಂದ ಉನ್ನತ ಶಿಕ್ಷಣ ಸಂಬಂಧ ಮಾಹಿತಿ ನೀಡುವ ಮಳಿಗೆ ಇಲ್ಲಿ ತೆರೆದುಕೊಳ್ಳಲಿದೆ.ನ.27ರಿಂದ ಡಿ.1 ವರೆಗೆ ಈ ಮಳಿಗೆ ಇರುವುದು. ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮತ್ತು ಪೆÇೀಷಕರಿಗೆ ವಿವಿಧ ತರಬೇತಿಗಳ ಕುರಿತು ಮಾಹಿತಿ ನೀಡುವ, ಸಂಶಯ ನಿವಾರಿಸುವ ಅವಕಾಶ ಇಲ್ಲಿದೆ. ವಿವಿಧ ಸಂಸ್ಥೆಗಳಲಿರುವ ಅವಕಾಶಗಳನ್ನು ಇಲ್ಲಿ ತಿಳಿದುಕೊಳ್ಳಬಹುದು. ದೇಶದ ಉನ್ನತ ಶಿಕ್ಷಣ ಸಂಬಂಧ ವಿಷಯಗಳ ಬಗ್ಗೆ, ಶಿಕ್ಷಣ ಸಂಬಂಧ 60 ಸ್ಟಾಲ್‍ಗಳು ಇಲ್ಲಿರಲಿದೆ. ಕೇರಳ ಕಲಾಮಂಡಲಂ ನಿಂದ ತೊಡಗಿ ಆಲಿಘಡ್ ವಿವಿವರೆಗೆ, ಕೃಷಿ ವಿವಿಯಿಂದ ಆರೋಗ್ಯ ವಿಜ್ಞಾನ ವಿವಿ ವರೆಗೆ, ಏಷ್ಯಾದಲ್ಲೇ ಏಕೈಕ ಸಂಸ್ಥೆ ಇಂಡಿಯನ್ ಇನ್ಸ್ ಸ್ಟಿಟ್ಯೂಟ್ ಆಫ್ ಸ್ಪೇಸ್ ಸಯನ್ಸ್ ಆಂಡ್ ಟೆಕ್ನಾಲಜಿ ಸಹಿತ ವಿವಿಧ ಸಂಸ್ಥೆಗಳ ಸ್ಟಾಲ್‍ಗಳು ಇರುವುವು.
ಪ್ರಕೃತಿ ಸ್ನೇಹಿಕಲೋತ್ಸವ:
ರಾಜ್ಯ ಮಟ್ಟದ ಶಾಲಾ ಕಲೋತ್ಸವ ಜಿಲ್ಲೆಯ ಕಾಞಂಗಾಡ್ ಮತ್ತು ಆಸುಪಾಸಿನ ಪ್ರದೇಶಗಳ 28 ವೇದಿಕೆಗಳಲ್ಲಿ ನಡೆಯುವ ವೇಳೆ ಹಸಿರು ಸಂಹಿತೆಯೊಂದಿಗೆ ಈ ಕಲಾ ಉತ್ಸವ ನಡೆಸುವತ್ತ ಆದ್ಯತೆ ನೀಡಲಾಗುತ್ತಿದೆ. ಪ್ಲಾಸ್ಟಿಕ್ ವಸ್ತುಗಳನ್ನು ಪೂರ್ಣ ಕೈಬಿಡಲಾಗಿದ್ದು, ಬಟ್ಟೆಯ ಚೀಲ ಸಹಿತ ಪ್ರಕೃತಿ ಸ್ನೇಹಿ ಸಾವiಗ್ರಿಗಳನ್ನು ಕಡ್ಡಾಯವಾಗಿ ಬಳಸಲು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಆದೇಶ ನೀಡಿದ್ದಾರೆ. ಇದರ ಅಂಗವಾಗಿ ಶಾಲೆ ಮಕ್ಕಳು ಕಲೋತ್ಸವದಲ್ಲಿ ಬಳಸುವ ನಿಟ್ಟಿನಲ್ಲಿ ಸುಮಾರು 300 ಬಟ್ಟೆಯ ಚೀಲಗಳನ್ನು ಸಿದ್ಧಪಡಿಸಿ ಜಿಲ್ಲಾಧಿಕಾರಿಗೆ ಹಸ್ತಾಂತರಿಸಿದ್ದಾರೆ. ಮುಳ್ಳೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಕೋ ಕ್ಲಬ್, ಪೆನ್ ಫ್ರೆಂಡ್ ಯೋಜನೆ ಸದಸ್ಯರು, ಬಳಕೆಯಿಲ್ಲದ ಪೆನ್‍ಗಳನ್ನು ಸಂಗ್ರಹಿಸಿ, ಗುಜರಿಗೆ ಮಾರಾಟ ಮಾಡಿ ಲಭಿಸಿದ ಮೊತ್ತದೊಂದಿಗೆ ಶಾಲೆಯ ರಕ್ಷಕ-ಶಿಕ್ಷಕ ಸಂಘದ ನಿಧಿಯನ್ನೂ ಸೇರಿಸಿ ಬಟ್ಟೆ ಚಿಲಗಳನ್ನು ತಯಾರಿಸಿದ್ದು, ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಚೀಲಗಳನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ ಹಸ್ತಾಂತರಿಸಿದ್ದಾರೆ.
ಶಾಲೆಯ ಮುಖ್ಯ ಶಿಕ್ಷಕ ಎ.ಅಶೋಕ್ ಅರಳಿತ್ತಾಯ, ಇಕೋ ಕ್ಲಬ್ ಸಂಚಾಲಕಿ ಎಂ.ಸಾವಿತ್ರಿ, ರಕ್ಷಕ-ಶಿಕ್ಷಕ ಸಂಘ ಅಧ್ಯಕ್ಷ ಎ.ಪದ್ಮನಾಭ, ಇಕೋ ಕ್ಲಬ್ ಸದಸ್ಯರಾದ ಬಿ.ಯದುಕೃಷ್ಣನ್, ಸಿ.ಎಚ್.ಸುಭಾಷ್ ಚೀಲ ಹಸ್ತಾಂತರ ವೇಳೆ ಜತೆಗಿದ್ದರು.
ಕಲೋತ್ಸವದಿಂದ ಮರಳುವವರಿಗೂ ಆಹಾರ ಪೆÇಟ್ಟಣ:
ರಾಜ್ಯ ಮಟ್ಟದ ಶಾಲಾ ಕಲೋತ್ಸವದಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸಿದ ನಂತರ ಊರಿಗೆ ಮರಳುವವರು ಬರಿದಾದ ಹೊಟ್ಟೆಯಲ್ಲಿ ಪ್ರಯಾಣ ಬೆಳೆಸಬಾರದು ಎಂಬ ಕಾಳಜಿಯನ್ನು ಇಲ್ಲಿನ ಆಹಾರ ಸಮಿತಿ ಹೊಂದಿದೆ. ಇದರ ಅಂಗವಾಗಿ ಕಲೋತ್ಸವ ಕಳೆದು ವಾಪಸಾಗುವವರಿಗೆ ಆಹಾರವನ್ನು ಪೆÇಟ್ಟಣದಲ್ಲಿ ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಪೆÇಟ್ಟಣದಲ್ಲಿ ಭೋಜನದಲ್ಲಿ ವೈವಿಧ್ಯತೆಯೂ ಇರಲಿದೆ.
27ರಿಂದ ಭೋಜನಾಲಯ ಚಾಲನೆ, ಶಾಲಾ ಬಸ್ ಗಳ ಉಚಿತ ಸೇವೆ
ರಾಜ್ಯ ಮಟ್ಟದ ಶಾಲಾ ಕಲೋತ್ಸವದ ಭೋಜನಾಲಯ ನ.27ರಿಂದ ಚಟುವಟಿಕೆ ಆರಂಭಿಸಲಿದೆ. ಅಂದು ಹಾಲುಕ್ಕಿಸುವ ಕಾಯಕದ ಮೂಲಕ ಅಡುಗೆ ಸಿದ್ಧಪಡಿಸುವ ಚಟುವಟಿಕೆಗಳಿಗೆ ಚಾಲನೆ ಲಭಿಸಲಿದೆ. ಕೇರಳೀಯ ಶೈಲಿಯ ಅಡುಗೆಯೊಂದಿಗೆ ತುಳುನಾಡಿನ ವಿಶೇಷತೆಗಳಾದ ಹೋಳಿಗೆ, ಕೇಸರಿಬಾತ್, ಗೋಳಿಬಜೆ ಇತ್ಯಾದಿಗಳನ್ನೂ ಸವಿಯಬಹುದು.
ಬೇರೆ ಬೇರೆ ಕಡೆಗಳಿಂದ ಈ ಭೋಜನಾಲಯಕ್ಕೆ ತೆರಳಲು ಶಾಲಾ ಬಸ್‍ಗಳ ಉಚಿತ ಸಂಚಾರ ಸೇವೆ ಲಭಿಸಲಿದೆ. ಪ್ರಧಾನವೇದಿಕೆಯಾಗಿರುವ ಐಂಙÉೂೀತ್‍ನಿಂದ 1.5 ಕಿಮೀ ದೂರದಲ್ಲಿರುವ ಕೊವ್ವಲ್‍ಪಳ್ಳಿಯಲ್ಲಿ ಬೃಹತ್ ಭೋಜನಾಲಂiÀ ಸಿದ್ಧವಾಗಿದೆ. 18 ಕೌಂಟರ್ ಗಳಲ್ಲಿ 2750 ಮಂದಿ ಏಕಕಾಲಕ್ಕೆ ಉಣ್ಣಬಹುದಾದ ಸೌಲಭ್ಯ ಏರ್ಪಡಿಸಲಾಗಿದೆ. ಬಡಿಸುವ, ಶುಚೀಕರಣದ,ಇನ್ನಿತರ ಚಟುವಟಿಕೆಗಳಿಗಾಗಿ 2 ಸಾವಿರಕ್ಕೂ ಅಧಿಕ ಸ್ವಯಂಸೇವಕರು ಸಿದ್ಧರಾಗಿದ್ದಾರೆ. ದಿನವೊಂದಕ್ಕೆ 500 ಸ್ವಯಂಸೇವಕರು ಕರ್ತವ್ಯದಲ್ಲಿರುವರು. ಶಿಕ್ಷಕರು, ಎನ್ನೆಸ್ಸೆಸ್, ಎನ್.ಸಿ.ಸಿ., ರೆಡ್ ಕ್ರಾಸ್, ಸಹಿತ ವಿವಿಧ ಸಂಸ್ಥೆಗಳ ಸದಸ್ಯರು ಸೇವೆ ಸಲ್ಲಿಸುವರು. ಕಂದಾಯ ಸಚಿವ ಇ.ಚಂದ್ರಶೇಖರನ್ ಅವರು ನ.23ರಂದು ಭೋಜನಾಲಯ ಸಂದರ್ಶಿಸಿ, ಅವಲೋಕನ ನಡೆಸಲಿದ್ದಾರೆ.

