ಮಂಜೇಶ್ವರ: ಇತ್ತೀಚೆಗೆ ನಡೆದ ಕಾಸರಗೋಡು ಕಂದಾಯ ಜಿಲ್ಲಾ ಶಾಲಾ ಕಲೋತ್ಸವದ ಸಂಸ್ಕೃತೋತ್ಸವ ವಿಭಾಗದಲ್ಲಿ ಮಂಜೇಶ್ವರ ಉಪ ಜಿಲ್ಲೆಯು ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು, ಹೈಸ್ಕೂಲ್ ವಿಭಾಗದಲ್ಲಿ ರನ್ನರ್ಸ್ ಅಪ್ ಸ್ಥಾನವನ್ನು ಸತತ ಮೂರನೇ ಬಾರಿ ಮಂಜೇಶ್ವರ ಉಪಜಿಲ್ಲೆ ತನ್ನದಾಗಿಸಿಕೊಂಡಿದೆ.
ಅದರಂಗವಾಗಿ ಉಪಜಿಲ್ಲಾ ಸಂಸ್ಕೃತ ಕೌನ್ಸಿಲ್ ನ ನೇತೃತ್ವದಲ್ಲಿ ವಿಜಯೋತ್ಸವ ಕಾರ್ಯಕ್ರಮವು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ಯನ್. ಅವರ ಅಧ್ಯಕ್ಷತೆಯಲ್ಲಿ ಮಂಜೇಶ್ವರ ಬಿ ಆರ್ ಸಿ ಯಲ್ಲಿ ನಡೆಯಿತು.
ಉಪಜಿಲ್ಲಾ ಕ್ಷೇತ್ರನಿರ್ವಹಣಾಧಿಕಾರಿ ಗುರುಪ್ರಸಾದ್ ರೈ ಶುಭಹಾರೈಸಿದರು. ಜಿಲ್ಲಾಮಟ್ಟದಲ್ಲಿ ಭಾಗವಹಿಸಿದ ಎಲ್ಲ ಸ್ಪರ್ಧಾಳುಗಳಿಗೆ ಕೌನ್ಸಿಲ್ ವತಿಯಿಂದ ಟ್ರೋಫಿಯನ್ನು ನೀಡಿ ಗೌರವಿಸಲಾಯಿತು. ಶಿವನಾರಾಯಣ ಭಟ್ ಸ್ವಾಗತಿಸಿ, ಕೌನ್ಸಿಲ್ ಕಾರ್ಯದರ್ಶಿ ಪ್ರಮೀಳಾ ಡಿ.ಯನ್ ವಂದಿಸಿದರು. ನಾರಾಯಣರಾಜ್ ನಿರೂಪಿಸಿದರು. ಬಳಿಕ ಉಪಾಹಾರ ಹಾಗೂ ಪಾಯಸ ವಿತರಿಸಲಾಯಿತು.


