ಕುಂಬಳೆ: ಕುಂಬಳೆಯ ಸೈಂಟ್ ಮೋನಿಕ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳ ಹೆತ್ತವರು, ಪೆÇೀಷಕರ ಕ್ರೀಡೋತ್ಸವವು ನ.16 ರಂದು ಶಾಲೆಯ ಕ್ರೀಡಾಂಗಣದಲ್ಲಿ ನಡೆಯಿತು.
ಕಬಡ್ಡಿ ಆಟಗಾರ ಹಾಗೂ ಕುಂಬಳೆ ಗ್ರಾಮ ಪಂಚಾಯತಿ ಸದಸ್ಯ ಸುಕೇಶ್ ಭಂಡಾರಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಈ ಸಂದರ್ಭದಲ್ಲಿ ಕ್ರೀಡೆಯ ಮಹತ್ವದ ಬಗ್ಗೆ ಮಾತನಾಡಿದ ಅವರು ದೈಹಿಕ ಕ್ಷಮತೆಯ ಜೊತೆಗೆ ಒಗ್ಗಟ್ಟಿನ ಸಂದೇಶವನ್ನು ಕ್ರೀಡೆ ನೀಡುತ್ತದೆ. ಕ್ರೀಡೋತ್ಸಾಹವು ಮಾನಸಿಕ ಸುದೃಢತೆಗೆ ಪ್ರೇರಣೆಯಾಗಿ ಆರೋಗ್ಯಪೂರ್ಣವಾದ ದೈಹಿಕತೆಗೆ ಬಲ ನೀಡುತ್ತದೆ ಎಂದರು. ಪ್ರಾಯದ ಪರಿಧಿಯಿಲ್ಲದೆ, ದಿನನಿತ್ಯದ ಜೀವನದಲ್ಲಿ ಒಂದಿಲ್ಲೊಂದು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಹಿರಿಯ ನಾಗರಿಕರು, ಮಧ್ಯವಯಸ್ಕರು ಹಾಗೂ ಮಹಿಳೆಯರು ಆಸಕ್ತರಾಗಬೇಕು ಎಂದು ಕರೆನೀಡಿದರು.
ಶಾಲಾ ಮುಖ್ಯೋಪಾಧ್ಯಾಯ ಫಾದರ್ ಅನಿಲ್ ಪ್ರಕಾಶ್ ಡಿಸಿಲ್ವ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಮಹೇಶ್ ಪುಣಿಯೂರು ಹಾಗೂ ಶಿಕ್ಷಕಿ ಆಶಿಕ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳ ಹೆತ್ತವರು ಹಾಗೂ ಪೆÇೀಷಕರು ವಿವಿಧ ಆಟೋಟಗಳಲ್ಲಿ ಭಾಗವಹಿಸಿದರು. ವಿಜೇತರಿಗೆ ಬಹುಮಾನ ನೀಡಲಾಯಿತು.


