ಉಪ್ಪಳ: ಕ್ಯಾಂಪೆÇ್ಕೀ ಬಾಯಾರು ಶಾಖೆಯ ಸದಸ್ಯರಾದ ಪೈವಳಿಕೆಯ ಎ.ಮೊಹಮ್ಮದ್ ಅವರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆಗಾಗಿ ಕ್ಯಾಂಪೆÇ್ಕೀ ವತಿಯಿಂದ ಸಹಾಯನಿಧಿಯನ್ನು ಬುಧವಾರ ವಿತರಿಸಲಾಯಿತು. ಸಹಕಾರಿ ಸಪ್ತಾಹದ ಅಂಗವಾಗಿ ಸದಸ್ಯರ ಮನೆ ಭೇಟಿ ಕಾರ್ಯಕ್ರಮದ ಸಂದರ್ಭದಲ್ಲಿ ಕ್ಯಾಂಪೆÇ್ಕೀ ನಿರ್ದೇಶಕರಾದ ಕೋಳಾರು ಸತೀಶ್ಚಂದ್ರ ಭಂಡಾರಿ ಅವರು ಚೆಕ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕ್ಯಾಂಪೆÇ್ಕೀ ಬದಿಯಡ್ಕ ವಲಯದ ವ್ಯವಸ್ಥಾಪಕ ಪ್ರಕಾಶ್ ಕುಮಾರ ಶೆಟ್ಟಿ, ಕೇಂದ್ರ ಕಛೇರಿಯ ಸಿಬ್ಬಂದಿಗಳಾದ ಗೀತಾ ಎ, ನಳಿನಿ ಹಾಗೂ ಬಾಯಾರು ಕ್ಯಾಂಪೆÇ್ಕೀ ಶಾಖೆಯ ವ್ಯವಸ್ಥಾಪಕ ಶ್ರೀಧರ್ ಜಿ.ಪಿ ಮೊದಲಾದವರು ಉಪಸ್ಥಿತರಿದ್ದರು.


