HEALTH TIPS

ಏಕತೆಯ ಸಂದೇಶ ಸಾರಲು ಪ್ರಯತ್ನಿಸಿ- ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ನಡೆದ ವಿಶ್ವ ಏಕೀಕರಣ ದಿನಾಚರಣೆಯಲ್ಲಿ ಶಂಕರ್ ಖಂಡಿಗೆ


     ಪೆರ್ಲ: ವಿವಿಧ ಜಾತಿಗಳಲ್ಲಿ, ಪಂಗಡದಲ್ಲಿ, ವಿಭಾಗದಲ್ಲಿ ನಾವು ಜನಿಸಿರಬಹುದು, ಬಡವನಾಗಿರಬಹುದು, ಶ್ರೀಮಂತನಾಗಿರಬಹುದು ಆದರೆ ನಮ್ಮಲ್ಲಿ ಹರಿಯುತ್ತಿರುವ ರಕ್ತದ ಬಣ್ಣ ಒಂದೇ. ಆದುದರಿಂದ ಯುವಜನಾಂಗ ವಿವಿಧತೆಯಲ್ಲಿ ಏಕತೆಯನ್ನು ಮೈಗೂಡಿಸಿಕೊಂಡು ಏಕತೆಯ ಸಂದೇಶ ಸಾರಲು ಪ್ರಯತ್ನಿಸಬೇಕು ಎಂದು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಶಂಕರ್ ಖಂಡಿಗೆ ಹೇಳಿದರು.
     ವಿಶ್ವ ಏಕೀಕರಣ ದಿನದ ಅಂಗವಾಗಿ ಪೆರ್ಲ ನಾಲಂದ ಕಾಲೇಜಿನಲ್ಲಿ ಬುಧವಾರ ಕಾಲೇಜು ಎನ್ನೆಸ್ಸೆಸ್ ಘಟಕ ಆಯೋಜಿಸಿದ್ದ ಸಮಾರಂಭದಲ್ಲಿ ಮುಖ್ಯ ಭಾಷಣಗೈದು ಅವರು ಮಾತನಾಡಿದರು.
     ವಿವಿಧತೆಗಳಿಂದ ಸ್ಥಾಪಿತವಾದ ಭಾರತದ ಪ್ರಪ್ರಥಮ ಮಹಿಳಾ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ವಿವಿಧತೆಯಲ್ಲಿ ಏಕತೆಯ ಭಾವನೆಯನ್ನು ಸಾರುವ ಸಲುವಾಗಿ ನಿರಂತರವಾಗಿ ಶ್ರಮಿಸಿದ್ದಾರೆ. ವ್ಯಕ್ತಿ ಮುಖ್ಯವಲ್ಲ ರಾಷ್ಟ್ರ ಮುಖ್ಯ ಎಂಬ ಸಂದೇಶವನ್ನು ಎತ್ತಿಹಿಡಿದು ರಾಷ್ಟ್ರದ ಏಕೀಕರಣಕ್ಕೆ ಅವರು ಪಟ್ಟ ಪ್ರಯತ್ನವನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವ ದೃಷ್ಟಿಯಿಂದ ಅವರ ಹುಟ್ಟುಹಬ್ಬದ ದಿನವನ್ನು ವಿಶ್ವ ಏಕೀಕರಣ ದಿನವನ್ನಾಗಿ ಆಚರಿಸಲಾಗುತ್ತದೆ ಎಂದರು.
   ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ. ಎಂ.ಮಾತನಾಡಿ,  ಭಾರತದಲ್ಲಿ ವಿವಿಧ, ಪಂಗಡ, ಜಾತಿ, ಸಮೂಹ, ವಿಭಾದವರು ವಾಸಿಸುತ್ತಿದ್ದು, ಇಂತಹ ರಾಷ್ಟದಲ್ಲಿ ವಿಶ್ವ ಏಕೀಕರಣ ದಿನದ ಆಚರಣೆ ಹೆಚ್ಚಿನ ಮಹತ್ವ ಪಡೆದಿದೆ ಎಂದರು.
     ಎನ್ನೆಸ್ಸೆಸ್ ಕಾರ್ಯದರ್ಶಿ ಕಾವ್ಯ, ಅಂಜನಾ, ಜಗತ್, ಅಭಿಲಾಶ್, ಅಜಿತ್ ಉಪಸ್ಥಿತರಿದ್ದರು. ಸಹನಾ ಕೆ. ಎಸ್. ಸ್ವಾಗತಿಸಿದರು. ಸಹನಾ ವಂದಿಸಿದರು. ದಿವ್ಯ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries